Recent Posts

Saturday, April 25, 2026
ಕ್ರೈಮ್ರಾಜಕೀಯರಾಜ್ಯಸುದ್ದಿ

ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ; ಚಾಕುವಿನಿಂದ ಇರಿಯಲು ಯತ್ನಿಸಿದ ಡಿಚ್ಚಿ ಅಲಿಯಾಸ್‌ ಮುಬಾರಕ್‌ ಜಿಹಾದಿ ಗ್ಯಾಂಗ್ – ಕಹಳೆ ನ್ಯೂಸ್

ತುಮಕೂರು, ಆ 16 : ತುಮಕೂರಿಗೂ ಸಾವರ್ಕರ್ / ಟಿಪ್ಪು ಫ್ಲೆಕ್ಸ್ ಫೈಟ್  ಹಬ್ಬಿದೆ. ನಗರದ ಎಂಪ್ರೆಸ್ ಕಾಲೇಜು ಸಮೀಪದ ಸಾರ್ವಕರ್ ಫ್ಲೆಕ್ಸ್ ಗೆ ಕತ್ತರಿ ಹಾಕಲಾಗಿದ್ದು ಇದು ವಿವಾವದಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ವಿವಾದವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಅದರ ವಿಚಾರವಾಗಿ ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಚೂರಿ ಇರಿದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೊಂದೆಡೆ ನಿಷೇಧಾಜ್ಞೆ ನಡುವೆಯೂ ಭದ್ರಾವತಿಯಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ.ಸುನೀಲ್‌ ಎಂಬಾತನ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ. ಭದ್ರಾವತಿ ನಗರದ ನೆಹರೂ ಬಡವಾಣೆಯಲ್ಲಿ ಘಟನೆ ನಡೆದಿದೆ. ಕೂದಲೆಳೆಯ ಅಂತರದಲ್ಲಿ ಸುನೀಲ್‌ ಪಾರಾಗಿದ್ದಾರೆ. ಗಾಯಾಳು ಸುನೀಲ್‌ ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಚ್ಚಿ ಅಲಿಯಾಸ್‌ ಮುಬಾರಕ್‌ ಸೇರಿ ಮೂವರಿಂದ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.