Recent Posts

Saturday, May 9, 2026
ದಕ್ಷಿಣ ಕನ್ನಡಸುದ್ದಿ

ಮರವೂರು ಸೇತುವೆ ಬಳಿಯ ರಸ್ತೆಯಲ್ಲಿ ಬಿರುಕು : ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ –ಕಹಳೆ ನ್ಯೂಸ್

ಮಂಗಳೂರು : ಕಳೆದ ಬಾರಿ ಮಳೆಗೆ ಬಿರುಕು ಬಿಟ್ಟಿದ್ದ ಮರವೂರು ಸೇತುವೆ ಬಳಿ ಇದೀಗ ರಸ್ತೆ ಕುಸಿದಿದ್ದು ಆತಂಕಕ್ಕೆ ಕಾರಣವಾಗಿದೆ. ದ ಬಜ್ಪೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಮರವೂರು ಸೇತುವೆಯ ಸನಿಹದ ರಸ್ತೆ ಬದಿಯಲ್ಲಿ ಬಿರುಕು ಕಂಡುಬAದಿದೆ.

ಸೇತುವೆ ಸನಿಹದ ರಸ್ತೆಯಲ್ಲಿ ಬಿರುಕು ಕಂಡು ಬಂದ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬಿರುಕು ಬಿಟ್ಟಿರುವ ಜಾಗಕ್ಕೆ ಮಣ್ಣು ಹಾಕುವ ಕೆಲಸ ನಡೆದಿದ್ದು, ಸೇತುವೆಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು