Recent Posts

Sunday, April 26, 2026
ದಕ್ಷಿಣ ಕನ್ನಡರಾಜಕೀಯಸುದ್ದಿ

ಮಂಗಳೂರು ಮಳಲಿ ಮಸೀದಿಯಲ್ಲಿ ದೇಗುಲ ಹೋಲುವ ರಚನೆ ಪತ್ತೆ ; ಶಾಸಕ ಭರತ್ ಶೆಟ್ಟಿ ,ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಗೆ ನಿರ್ಧಾರ – ಕಹಳೆ ನ್ಯೂಸ್

ಮಂಗಳೂರು, ಮೇ 23 : ಮಳಲಿ ದರ್ಗಾ ನವೀಕರಣಕ್ಕಾಗಿ ಕೆಡವಿದಾಗ ದೇವಸ್ಥಾನ ಹೋಲುವ ರಚನೆ ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿ ಇದ್ದಿರಬಹುದಾದ ದೇವರ ಸಾನಿಧ್ಯದ ಕುರಿತು ತಿಳಿಯುವ ಉದ್ದೇಶದಿಂದ ಮೇ ೨೪ ಅಥವಾ ಮೇ.25ರಂದು ತಂಬೂಲ ಪ್ರಶ್ನೆ ಇಡಲು ಸ್ಥಳೀಯರು ಹಾಗೂ ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.


ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾ ನವೀಕರಣಕ್ಕಾಗಿ ಮುಂಭಾಗವನ್ನು ಕೆಡವಲಾಗಿತ್ತು.ಈ ಸಂದರ್ಭ ಹಿಂಭಾಗದಲ್ಲಿ ದೇವಸ್ಥಾನದ ಕಲಶ, ತೋಮರ, ಕಂಬಗಳ ರೀತಿಯ ಮಾದರಿ ಪತ್ತೆಯಾಗಿದೆ. ದರ್ಗಾದಲ್ಲಿ ಜೈನ ಅಥವಾ ಹಿಂದೂ ದೇವಸ್ಥಾನ ಇರುವ ಸಾಧ್ಯತೆ ಬಗ್ಗೆ ಸ್ಥಳೀಯರಲ್ಲಿ ಅನುಮಾನ ಹುಟ್ಟುಹಾಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಹಿಂದೂ ಪರಿಷತ್, ಜಾಗದ ಧಾರ್ಮಿಕ ಮಹತ್ವ ತಿಳಿಯಲು ನಿರ್ಧರಿಸಿ, ಆ ಜಾಗದಲ್ಲಿ ದೈವಿಕ ಶಕ್ತಿ ಇದೆಯೊ ಇಲ್ಲವೂ ಎಂದು ತಿಳಿಯಲು ತಾಂಬೂಲ ಪ್ರಶ್ನೆ ಮೊರೆ ಹೋಗಲು ಮಳಲಿ ಮಣೇಲ್ನ ರಾಮಾಂಜನೇಯ ಭಜನ ಮಂದಿರದಲ್ಲಿ ನಡೆದ ಪೂರ್ವಸಿದ್ದತಾ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.

ತಾಂಬೂಲ ಪ್ರಶ್ನೆ ಇಡಲು ಕೇರಳದ ಪೊದುವಾಳ್‌ ಅವರನ್ನು ಕರೆಸಲಾಗುತ್ತಿದೆ. ಇದೇ ಸಮಯದಲ್ಲಿ ಮುಂದಿನ ಹೋರಾಟದ ಬಗ್ಗೆ ಪೂರ್ವಸಿದ್ದತೆ ಸಭೆ ನಡೆದಿದ್ದು, ಸ್ಥಳೀಯ ಶಾಸಕ ಭರತ್ ಶೆಟ್ಟಿ, ವಿ.ಎಚ್.ಪಿ ಮುಖಂಡರ ನೇತೃತ್ವ ವಹಿಸಿದ್ದರು. ಹಿಂದೂ ಸಂಘಟನೆ ಪ್ರಮುಖರು, ಸ್ಥಳೀಯ ಜನ ಪ್ರತಿನಿಧಿಗಳು, ಊರಿನ ಹಿರಿಯರ ಜೊತೆ ಸಭೆ ನಡೆದಿದೆ.