Tuesday, April 28, 2026
ದಕ್ಷಿಣ ಕನ್ನಡಸುದ್ದಿ

ಎ.21ರಂದು ಶ್ರೀ ಎಡನೀರು ಮಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದಲ್ಲಿ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರ ಸೇವಾರೂಪದಲ್ಲಿ ಸಮರ್ಪಿಸಲಿರುವ ನೂತನ ಗುರುಭವನದ ಭೂಮಿ ಪೂಜಾ ಸಮಾರಂಭ – ಕಹಳೆ ನ್ಯೂಸ್

ಕಾಸರಗೋಡು : ಶ್ರೀ ಎಡನೀರು ಮಠ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಆಶೀರ್ವಾದಗಳೊಂದಿಗೆ ಎ.21ರಂದು ಬೆಳಗ್ಗೆ 11-15ಕ್ಕೆ ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆ ಇವರು ಸೇವಾರೂಪದಲ್ಲಿ ಸಮರ್ಪಿಸಲಿರುವ ನೂತನ ಗುರುಭವನದ ಭೂಮಿಪೂಜಾ ಸಮಾರಂಭ ನಡೆಯಲಿದೆ.

ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಗಳಾಗಿರುವ ಗುರುಸೇವಾಧುರೀಣ, ಪದ್ಮಶ್ರೀ ಪುರಸ್ಕೃತರಾದ ಡಾ| ವಿ. ಆರ್. ಗೌರೀಶಂಕರ್ ಅವರು ನೂತನ ಗುರುಭವನದ ಭೂಮಿಪೂಜಾ ಸಮಾರಂಭ ನೆರವೇರಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಕಾಸರಗೋಡಿನ ಲೋಕಸಭಾ ಸದಸ್ಯರಾದ ಶ್ರೀ ರಾಜ್‌ಮೋಹನ್ ಉಣ್ಣಿತ್ತಾನ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು, ಹಾಗೂ ಕರ್ನಾಟಕ ಸರಕಾರ ಮಾಜಿ ಎಡ್ವಕೇಟ್ ಜನರಲ್ ಆಗಿರುವ ಅಶೋಕ್ ಹಾರನಹಳ್ಳಿ ಭಾಗವಹಿಸಲಿದ್ದಾರೆ.