Tuesday, April 28, 2026
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಮಜಿ ವೀರಕಂಬನ ಶಾಲೆಯಲ್ಲಿ ಅಡಿಕೆ ಸುಲಿದ ವಿದ್ಯಾರ್ಥಿಗಳು..!!!- ಕಹಳೆ ನ್ಯೂಸ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬದಲ್ಲಿ ಶಾಲಾ ಅಡಿಕೆ ತೋಟದಲ್ಲಿ ಬೆಳೆದ ಕೊಯ್ಲಿನ ಅಡಿಕೆಯನ್ನು ಸುಲಿಯುವ ರೀತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಗಿದೆ. ಈ ವೇಳೆ ಮಾತನಾಡಿದ ಶಾಲಾ ಎಸ್‌ಡಿಎಂಸಿ ಸದಸ್ಯರಾದ ಗೋಪಾಲಕೃಸ್ಣ ಭಟ್ ದಿವಾನgರು ಶಿಕ್ಷಣವು ಪ್ರತಿ ಹಂತದಲ್ಲೂ ಹೊಸ ಕಲಿಕೆಯೊಂದಿಗೆ ಅನುಭವವನ್ನು ಕೊಡುತ್ತದೆ ಮಗು ಅನುಭವದ ಮೂಲಕ ಕಲಿತ ವಿದ್ಯೆಯು ಜೀವನದಲ್ಲಿ ಎಂದಿಗೂ ಮರೆತು ಹೋಗಲಾರದು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮುಖ್ಯಶಿಕ್ಷಕ ನಾರಾಯಣ ಪೂಜಾರಿ, ಶಾಲಾ ಶಿಕ್ಷಕಿಯರು ,ಮಕ್ಕಳ ಪೋಷಕರು ಉಪಸ್ಥಿತರಿದ್ದರು