Recent Posts

Saturday, April 25, 2026
ದಕ್ಷಿಣ ಕನ್ನಡಸುದ್ದಿ

ಮಂಗಳೂರು : ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಅಳವಡಿಸಲಾದ ತುಳು ಲಿಪಿಯ ನಾಮಫಲಕ ಉದ್ಘಾಟಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು : ಸುಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ತುಳು ಲಿಪಿಯ ನಾಮಫಲಕವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕ ಕಾಮತ್, ಕೆಲವು ಸಮಯದ ಹಿಂದೆ ತುಳು ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಶಿಶ್ಮಿತ ಎನ್ಮುವ ಪುಟ್ಟ ಹುಡುಗಿ ಮಂಗಳದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವಂತೆ ಸ್ವತಃ ತಾನೇ ತುಳು ಲಿಪಿಯಲ್ಲಿ ಮನವಿ ಬರೆದು ನೀಡಿದ್ದಳು. ಆಕೆಯ ಕೋರಿಕೆಯಂತೆ ಮಂಗಳಾದೇವಿ ದೇವಸ್ಥಾನ ರಸ್ತೆಗೆ ತುಳುವೆರ್ ಕುಡ್ಲ ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಿ ಇಂದು ಶಿಶ್ಮಿತಾಳ ಕೈಯಲ್ಲಿ ಉದ್ಘಾಟಿಸಿದ್ದೇವೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ತುಳು ಭಾಷೆಗೆ ಮಾನ್ಯತೆ ನೀಡುವ ಕುರಿತು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ತುಳು ಲಿಪಿಯ ಕುರಿತು ಸಾಕಷ್ಟು ಪ್ರಮಾಣದಲ್ಲಿ ಪ್ರಚಾರ ನೀಡುವ ಅವಶ್ಯಕತೆ ಇರುವ ಕಾರಣ ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುತಿದ್ದೇವೆ. ತುಳುಲಿಪಿಯ ಬಳಕೆ ಹೆಚ್ಚಾದಂತೆ ಭಾಷೆಯ ಉಳಿವಿಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ನಾಮ ನಿರ್ದೇಶಿತ ಸದಸ್ಯರಾದ ರಮೇಶ್ ಕಂಡೆಟ್ಟು, ತುಳುವೆರ್ ಕುಡ್ಲ ಸಂಘಟನೆಯ ಪ್ರಮುಖರಾದ ಪ್ರತೀಕ್ ಪೂಜಾರಿ, ಸಂತೋಷ್ ಕುಮಾರ್, ರೋಷನ್ ರೊನಾಲ್ಡ್, ಅಕ್ಷಯ್ ಪೇಜಾವರ,ಚರಿತ್ ಪೂಜಾರಿ, ಜಯರಾಮ್ ಎಚ್, ಪ್ರತೀಕ್ ರಾವ್, ಪವನ್ ಕುಮಾರ್, ಸುಳೀಲ್ ಪಾಲನ್ನ, ದೀಕ್ಷಿತ್ ಬಿ, ವರುಣ್,ಯಾದವ್ ಕೋಟ್ಯಾನ್, ಅರ್ಜುನ್ ಬೋಳಾರ್, ಕದ್ರಿ ಕ್ರಿಕೇಟರ್ಸ್ ಪ್ರಮುಖರಾದ ಜಗದೀಶ್ ಕದ್ರಿ, ಆದಿತ್ಯ ಮುಂತಾದವರು ಉಪಸ್ಥಿತರಿದ್ದರು.