ಹಿಂದೂ ಕಾರ್ಯಕರ್ತ ಶ್ರೀಹರ್ಷ ರವರ ಹತ್ಯೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಹಿಂದುತ್ವನಿಷ್ಠ ಸಂಘಟನೆಗಳ ವತಿಯಿಂದ ಮನವಿ – ಕಹಳೆ ನ್ಯೂಸ್

ಮಂಗಳೂರು : ಹಿಂದೂ ಕಾರ್ಯಕರ್ತ ಶ್ರೀ. ಹರ್ಷ ರವರ ಹತ್ಯೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ಒಪ್ಪಿಸಬೇಕು ಮತ್ತು ಈ ಕೃತ್ಯವನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಪರವಾಗಿ ಚುನಾವಣಾ ತಹಶೀಲ್ದಾರರಾದ ಶ್ರೀ. ಕೆ. ಎಸ್. ದಯಾನಂದ ಇವರಿಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶ್ರೀ. ಉಪೇಂದ್ರ ಭಗವತಿ ಶ್ರೀ. ರಾಜೇಶ್ ಕೊಟ್ಟಾರ, ಶ್ರೀ. ಸುಧಾಕರ ಉರ್ವ, ಶ್ರೀ. ಯೋಗೀಶ್ ಅಶ್ವಥಪುರ ಮತ್ತು ಧರ್ಮಪ್ರೇಮಿಗಳಾದ ರಾಮಸೇನೆಯ ಜಿಲ್ಲಾಧ್ಯಕ್ಷರು ಶ್ರೀ. ಕಿರಣ್ ಅಮೀನ್ ಉರ್ವಸ್ಟೋರ್, ಜಿಲ್ಲಾ ಉಪಾಧ್ಯಕ್ಷರು ಶ್ರೀ. ಲೋಕೇಶ್ ರಾವ್ ಬೆಳ್ತಂಗಡಿ, ಶ್ರೀ. ವೈಶಾಖ್ ಹೊಸಬೆಟ್ಟು ಗೋರಕ್ಷ ಪ್ರಮುಖ್, ಸೌ. ಸುಜಯ ಶೆಟ್ಟಿ ಸುರತ್ಕಲ್, ಸೌ. ಪ್ರಮೀಳಾ ಕೊಡಿಯಾಲ್ ಬೈಲ್, ಶ್ರೀಧರ್ಮೇಶ್ ಉಳ್ಳಾಲ , ಶ್ರೀ. ಸುರೇಶ್ ಕೋಣಾಜೆ , ಶ್ರೀ. ಶ್ರೀಧರ ಇವರು ಉಪಸ್ಥಿತರಿದ್ದರು.









