Monday, April 27, 2026
ಸುದ್ದಿ

ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3.86 ಕೋಟಿ ರೂಪಾಯಿ ಅನುದಾನದಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಶನ್ ಯೋಜನೆಗೆ ಶಾಸಕ ಭರತ್ ಶೆಟ್ಟಿಯವರಿಂದ ಶಂಕುಸ್ಥಾಪನೆ – ಕಹಳೆನ್ಯೂಸ್

ಮಂಗಳೂರು: ಅಡ್ಯಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3.86 ಕೋಟಿ ರೂಪಾಯಿ ಅನುದಾನದಲ್ಲಿ ಕೇಂದ್ರ ಸರ್ಕಾರದ ಜಲಜೀವನ್ ಮಿಶನ್ ಯೋಜನೆ ಮನೆ ಮನೆಗೆ ಗಂಗೆ ಅನುಷ್ಠಾನಕ್ಕೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಶಂಕುಸ್ಥಾಪನೆ ನೆರವೇರಿಸಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನತ್, ಉಪಾಧ್ಯಕ್ಷರಾದ ಎಮ್ಲಿಡಾ ಪಿಂಟೊ , ಪಂಚಾಯತ್ ಸದಸ್ಯರುಗಳು, ಪಂಚಾಯತ್ ಪಿಡಿಒ ಕೃಷ್ಣ ನಾಯ್ಕ್, ಕಾರ್ಯದರ್ಶಿ ಪಂಕಜಾ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸಂತೋಷ್ ತುಪ್ಪೆಕಲ್, ಸಚಿನ್ ಹೆಗ್ಡೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಮಹಾಬಲ ಅಡ್ಯಾರ್ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ,. ಪ್ರತಿಮಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷೆ, ಕೃಷ್ಣ ಆಡ್ಯಾರ್ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯದರ್ಶಿ, ಅಶೋಕ್ ಕೊಟ್ಟಾರಿ ಮಂಡಲ ಫಲಾನುಭವಿಗಳ ಪ್ರಕೋಷ್ಠ ಸದಸ್ಯರು, ಶಕ್ತಿಕೇಂದ್ರ ಪ್ರಮುಖರಾದ ಯಾದವ ಸಾಲಿಯಾನ್ , ಜಯರಾಂ ಶೆಟ್ಟಿಗಾರ್, ಬೂತ್ ಅಧ್ಯಕ್ಷರುಗಳು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು