Friday, July 24, 2026
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

Breaking News : ಪುತ್ತೂರು ಬೈಪಾಸ್ನಲ್ಲಿ ಲಾರಿ – ಸ್ಕೂಟರ್ ಭೀಕರ ಅಪಘಾತ ; ಕೃಷಿ ಯಂತ್ರೋಪಕರಣ ಮಾರಾಟದ ಪ್ರತಿಷ್ಟಿತ ಕೊಡಿಬೈಲ್ ಸಮೂಹ ಸಂಸ್ಥೆ ಮಾಲಕ, ಸಾಮಾಜಿಕ ಮುಂದಾಳು ಸತ್ಯನಾರಯಣ ಭಟ್ ( ಕೊಡಿಬೈಲ್ ಸತ್ಯಣ್ಣ ) ಮೃತ್ಯು – ಕಹಳೆ ನ್ಯೂಸ್

ಪುತ್ತೂರು: ಮೇ 17 : ಪುತ್ತೂರಿನ ಬೈಪಾಸು ರಸ್ತೆ ತೆಂಕಿಲ ಬಳಿ ಮೇ 17 ರಂದು ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಲ್ಲಿನ ಪ್ರಸಿದ್ದ ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣಗಳ ಮಾರಾಟ ಮಳಿಗೆ ಕೊಡಿಬೈಲ್ ಎಜೆನ್ಸಿ ಹಾಗೂ ಕೊಡಿಬೈಲ್ ಇಂಪೋರ್ಟ್ ಅಂಡ್ ಎಕ್ಸ್ ಪೋರ್ಟ್ ಪ್ರೈ ಲಿ. ಮಾಲಕ, ಸಾಮಾಜಿಕ ಮುಂದಾಳು ಸತ್ಯನಾರಯಣ ಭಟ್ ಮೃತಪಟ್ಟಿದ್ದಾರೆ.

ಪುತ್ತೂರಿನ ತೆಂಕಿಲದ ವಿವೇಕಾನಂದ ಕ್ಯಾಂಪಸ್ ಬಳಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ಸ್ಕೂಟರ್ ಮಧ್ಯೆ ಈ ಅಪಘಾತ ಸಂಭವಿಸಿತ್ತು. ಮೃತಪಟ್ಟ ಸತ್ಯನಾರಾಯಣ ಭಟ್ ಅವರು ಸ್ಕೂಟರ್ ಚಲಾಯಿಸುತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಬೆಳಿಗ್ಗೆ ಪುತ್ತೂರಿನ ದರ್ಭೆಯ ಅಶ್ವಿನಿ ಸರ್ಕಲ್ ಬಳಿಯ ತಮ್ಮ ಮಳಿಗೆಗೆ ಬಂದಿದ್ದ ಅವರು ಅಲ್ಲಿ ತಮ್ಮ ಕಾರ್ ಪಾರ್ಕ್ ಮಾಡಿ ಸ್ಕೂಟರ್ ನಲ್ಲಿ ಬೈಪಾಸ್ ನಲ್ಲಿ ತೆರಳುತಿದ್ದ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಮೃತ ದೇಹವನ್ನು ಪುತ್ತೂರು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ದಯಾನಂದ ಅವರ ಸಹಕಾರದೊಂದಿಗೆ ಪುತ್ತೂರು ಸರಕಾರಿ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮನಾಯ್ಕ್ ಮತ್ತು ಸಿಬ್ಬಂದಿಗಳು ತೆರಳಿ ಮಾಹಿತಿ ಪರಿಶೀಲನೆ ನಡೆಸಿದ್ದಾರೆ.

ಸಾಮಾಜಿಕವಾಗಿಯೂ ಸತ್ಯನಾರಾಯಣ ಭಟ್ ಅವರು ತೊಡಗಿಸಿಕೊಂಡಿದ್ದು, ಅನೇಕ‌ ವರ್ಷಗಳಿಂದ ಕೃಷಿಕರ ಸ್ನೇಹಿತನಾಗಿ ತಮ್ಮ ಉದ್ಯಮ ನಡೆಸುತ್ತಿದ್ದು, ಕೋವಿಡ್ ಸಂದರ್ಭದಲ್ಲೂ ರೈತರ ಸಂಕಷ್ಟಕ್ಕೆ ಸ್ಪಂದನೆ ನೀಡುತ್ತಿದ್ದರು.