Wednesday, May 6, 2026
ಪುತ್ತೂರು

ರಾತ್ರಿ ಜಾತ್ರೆಗೆಂದು ತೆರಳಿದ್ದ ಯುವಕನ ಮೃತ ದೇಹ ಕೆರೆಯಲ್ಲಿ ಪತ್ತೆ-ಕಹಳೆ ನ್ಯೂಸ್

ಪುತ್ತೂರು : ರಾತ್ರಿ ಮನೆ ಪಕ್ಕದ ದೇವಳದಲ್ಲಿ ನಡೆಯುತ್ತಿದ್ದ ಜಾತ್ರೆಗೆಂದು ತೆರಳಿದ್ದ ಸ್ನಾತಕೋತರ ಪದವಿ ವಿದ್ಯಾರ್ಥಿಯ ಮೃತ ದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಮಾರ್ಚ್ 7 ರಂದು ಬೆಟ್ಟಂಪಾಡಿ ಗ್ರಾಮದ ಗುಮ್ಮಟೆ ಗದ್ದೆಯಲ್ಲಿ ಬೆಳಿಗ್ಗೆ ನಡೆದಿದೆ. ಮೃತಪಟ್ಟ ಯುವಕನನ್ನು ಬೆಟ್ಟಂಪಾಡಿ ಗುಮ್ಮಟೆಗದ್ದೆ ಕೂಸಪ್ಪ ಗೌಡರವರ ಪುತ್ರ ಪವನ್ ಎಂದು ತಿಳಿದುಬಂದಿದೆ. ಖಾಸಗಿಯಾಗಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದರು. ಮೃತರು ತಂದೆ ತಾಯಿ ಹಾಗೂ ಐವರು ಸಹೋದರಿಯನ್ನು ಅಗಲಿದ್ದಾರೆ. ತಮ್ಮ ಮನೆಯ ನೆರೆಮನೆಯಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿ ಬರುವುದಾಗಿ ತೆರಳಿದ್ದ ಪವನ್ ಬೆಳಿಗ್ಗೆ 6 ಗಂಟೆಯಾದರೂ ಮನೆಗೆ ಹಿಂತಿರುಗಿರಲಿಲ್ಲ. ಆತನ ಮೊಬೈಲ್ ಗೆ ಕರೆ ಮಾಡಿದಾಗ ಅದು ಲ್ ಸ್ವಿಚ್ ಆಫ್ ಬರುತಿತ್ತು ಹೀಗಾಗಿ ಮನೆ ಮಂದಿ ನೇಮೋತ್ಸವಕ್ಕೆ ತೆರಳುವ ಕಾಲು ದಾರಿಯಲ್ಲಿ ಹುಡುಕಾಟಕ್ಕೆ ಇಳಿದಾಗ ಮನೆ ಸಮೀಪದಲ್ಲಿರುವ ತಿಮ್ಮಪ್ಪ ಗೌಡ ಎಂಬವರಿಗೆ ಸೇರಿದ ಕೆರೆಯಲ್ಲಿ ಅವರ ಚಪ್ಪಲಿ ತೇಲುತ್ತಿರುವುದು ಕಂಡುಬಂದಿದೆ. ಇದರಿಂದ ಅನುಮಾನಗೊಂಡು ಮನೆಯವರು ಹಾಗೂ ಸ್ಥಳೀಯರು ಕೆರೆಯಲ್ಲಿ ಶೋಧಿಸಿದಾಗ ಪವನ್ ದಾಗ ಅವರ ಮೃತದೇಹ ಪತ್ತೆಯಾಗಿದೆ. ದ್ರುಷಿ ದೋಷದಿಂದಾಗಿ ಸರಿಯಾಗಿ ಕಣ್ಣು ಕಾಣಿಸದೇ ಇದ್ದ ಪವನ್ ನೇಮೋತ್ಸವಕ್ಕೆ ಹೋಗುವ ಸಂದರ್ಭ ಕಾಲು ದಾರಿಯ ಬಡಿಯ ಕೆರೆಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.