Thursday, May 14, 2026
ಸುದ್ದಿ

ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ! – ಕಹಳೆ ನ್ಯೂಸ್

ಕಿಡಿಗೇಡಿಗಳು ಮತ್ತೊಂದು ವಿವಾದಾತ್ಮಕ ಗೋಡೆ ಬರಹ ಬರೆದಿರುವ ಘಟನೆ ಮಂಗಳೂರು ನಗರದ ಕೋರ್ಟ್ ರಸ್ತೆಯಲ್ಲಿ ನಡೆದಿದ್ದು, ವಿವಾದಾತ್ಮಕ ಗೋಡೆ ಬರಹವನ್ನು ಉರ್ದು ಭಾಷೆಯಲ್ಲಿ ಬರೆದಿದ್ದಾರೆ.

ಕಿಡಿಗೇಡಿಗಳು ಗೋಡೆಯ ಮೇಲೆ ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ. ತಲೆ ದೇಹದಿಂದ ಬೇರ್ಪಡುವುದು ಎಂಬರ್ಥದಲ್ಲಿ ಉರ್ದು ಭಾಷೆಯಲ್ಲಿ ಬರೆಯಲಾಗಿದೆ.ಮಂಗಳೂರಿನ ಕೋರ್ಟ್ ರಸ್ತೆಯ ಆವರಣದಲ್ಲಿರುವ ಹಳೆ ಪೊಲೀಸ್ ಲೇ ಔಟ್ ಪೋಸ್ಟ್ ಕಟ್ಟಡದ ಮೇಲೆ ಕಿಡಿಗೇಡಿಗಳು ಈ ಬರಹವನ್ನು ಬರೆದಿದ್ದಾರೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಂದರು ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು