Recent Posts

Sunday, April 26, 2026
ರಾಜ್ಯ

ತಹಶೀಲ್ದಾರ್ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿಯೊಂದಿಗೆ ತಹಶೀಲ್ದಾರ್ ಸರಸ ಸಲ್ಲಾಪ, ಲಿಪ್ ಲಾಕ್ ; ಬಿಸಿ ಬಿಸಿ ವಿಡೀಯೋ ವೈರಲ್ – ಕಹಳೆ ನ್ಯೂಸ್

ಕೊಪ್ಪಳ: ಆ 26: ಸರ್ಕಾರಿ ಕಚೇರಿಯಲ್ಲೇ ಉನ್ನತ ಸ್ಥಾನದ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿ ಜತೆ ನಡೆಸಿದ ಸರಸ ಸಲ್ಲಾಪದ ವಿಡಿಯೋ ಒಂದು ವೈರಲ್ ಆಗಿ ಅಧಿಕಾರಿಯನ್ನು ಪೇಚಿಗೆ ಸಿಲುಕಿಸಿದೆ. ಎರಡು ತಿಂಗಳ ಹಿಂದೆ ಘಟಿಸಿದ ಘಟನೆ ಈಗ ಮುನ್ನಲೆಗೆ ಬಂದಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಹಶೀಲ್ದಾರ್ ಕಚೇರಿಯಲ್ಲಿ ಈ ಘಟನೆ ಸಂಭವಿಸಿದ್ದು ಆಗ ಅಲ್ಲಿ ತಹಶೀಲ್ದಾರ್ ಆಗಿದ್ದ ಗುರುಬಸವರಾಜ್ ತನ್ನ ಸಹದ್ಯೋಗಿಗೆ ಚುಂಬಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಕಿಸ್ ಮಾಡಿ ವಿವಾದಕ್ಕಿಡಾಗಿರುವ ಗುರುಬಸವರಾಜ್ ಕುಷ್ಟಗಿ ತಾಲೂಕಿನಿಂದ ವರ್ಗಾವಣೆಯಾಗಿದ್ದು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲಿಂದ ವರ್ಗಾವಣೆಗೊಂಡ ಬಳಿಕ ಅವರ ಕಿಸ್ಸಿಂಗ್ ಸೀನ್ ಈಗ ವೈರಲ್ ಆಗಿದೆ. ಕಚೇರಿಯಲ್ಲಿಯೇ ರಾಸ ಲೀಲೆ ನಡೆಸಿದ ವಿಡಿಯೋ ಹಾಗೂ ಮಾಹಿತಿ ಉನ್ನತ ಅಧಿಕಾರಿಗಳಿಗೆ ಸಿಕ್ಕ ಬಳಿಕ ಮುಜುಗರ ತಪ್ಪಿಸಲು ಅವರನ್ನು ವರ್ಗಾವಣೆ ಮಾಡಲಾಗಿತ್ತು ಹಾಗೂ ವಿಚಾರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು ಎಂಬ ಆರೋಪ ಕೇಳಿ ಬಂದಿದೆ. ಆದರೆ ಇದೀಗ ಈ ವಿಡಿಯೋ ಬಹಿರಂಗವಾಗಿ ರಕ್ಷಿಸಲು ಪ್ರಯತ್ನಿಸಿದ್ದ ಹಿರಿಯ ಅಧಿಕಾರಿಗಳನ್ನೂ ಪೇಚಿಗೆ ಸಿಲುಕಿಸಿದೆ.

ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ರಾಸಲೀಲೆ ಮಾಡಿ ಹುದ್ದೆಯ ಘನತೆಗೆ ದಕ್ಕೆ ತಂದಿದ್ದಾರೆ. ಅಂತಹಾ ಅಧಿಕಾರಿಯ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ದುರುಪಯೋಗ ಪಡಿಸಿ ಕಿಸ್ ಮಾಡಿ ಕಚೇರಿಯ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.