Saturday, October 3, 2026
ಬೆಂಗಳೂರುರಾಜ್ಯಸುದ್ದಿ

ರೇಣುಕಾಸ್ವಾಮಿ ಕೊಲೆ ಕೇಸ್; ಮತ್ತೆ 2 ಅರ್ಜಿ ಸಲ್ಲಿಸಿದ ಆರೋಪಿ, ನಟ ದರ್ಶನ್ – ಕಹಳೆ ನ್ಯೂಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ, ನಟ ದರ್ಶನ್ ಮತ್ತೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮಾಫಿ ಸಾಕ್ಷಿ ಪ್ರದೋಷ್‌ಗೆ ಎಸ್ಕಾರ್ಟ್ ಹಾಗೂ ಭೇಟಿ ಬಗ್ಗೆ ಒಂದು, ಮಾಫಿ ಸಾಕ್ಷಿ ವಿಚಾರಣೆ ಅನುಕ್ರಮದ ಬಗ್ಗೆ ಮತ್ತೊಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಎಸ್ಕಾರ್ಟ್ ಹಾಗೂ ಪ್ರದೋಷ್ ಜೊತೆ ಇತರರ ಭೇಟಿಗೆ ಅವಕಾಶ ನೀಡದಂತೆ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಜಾಹೀರಾತು

ಬೆಂಗಾವಲು ಪಡೆಗೆ ಅಗತ್ಯ ಸಲಹೆ ಸೂಚನೆ ನೀಡುವಂತೆ ಕೋರಿ ನಟ ದರ್ಶನ್ ಪರ ವಕೀಲರಿಂದ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ವಿಚಾರಣೆಯನ್ನು ಸೆಷನ್ಸ್ ಕೋರ್ಟ್ ನಡೆಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ದರ್ಶನ್ ಅರ್ಜಿಗೆ ಪ್ರಾಸಿಕ್ಯೂಷನ್ ಎಸ್‌ಪಿಪಿ ಅವರು ಉತ್ತರಿಸಿದ್ದು, ನ್ಯಾಯಾಲಯದ ಆದೇಶದಂತೆ ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಜೈಲು ಅಧಿಕಾರಿಗಳು ಸಿಎಆರ್ ಎಸ್ಕಾರ್ಟ್ ನಲ್ಲಿ ಜೈಲಿನ ಬಸ್‌ನಲ್ಲಿ ಕರೆ ತಂದಿದ್ದಾರೆ. ಬಾಡಿ ಕ್ಯಾಮೆರಾ ಧರಿಸಿದ ಜೈಲು ಸಿಬ್ಬಂದಿ ಕೋರ್ಟ್ ಕರೆ ತರಲಾಗಿದೆ. ಪ್ರದೋಷ್ ಸುರಕ್ಷತೆ ಮತ್ತು ಭದ್ರತೆ ಸಲುವಾಗಿ ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ಪೈಲಟ್ ಮಾಡಿದ್ದಾರೆ. ಪ್ರದೋಷ್ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಅಗತ್ಯ ಆದೇಶ ನೀಡಲು ಎಸ್‌ಪಿಪಿ ಮನವಿ ಮಾಡಿದರು. ಕೋರ್ಟ್ ಅರ್ಜಿ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದೆ. ಈ ಬಗ್ಗೆ ಶನಿವಾರ ಕೋರ್ಟ್ ಆದೇಶ ನೀಡಲಿದೆ.

ಅದೇ ರೀತಿ ಮಾಫಿ ಸಾಕ್ಷಿ ವಿಚಾರಣೆ ಸಂಬಂಧ ಮತ್ತೊಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಎವಿಡೆನ್ಸ್ ಆಕ್ಟ್ ಸೆಕ್ಷನ್ 137, 138ರಡಿ ಅರ್ಜಿ ಎರಡನೇ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿ ಸಮಯ ಕೇಳಿದ್ದಾರೆ. ಅಕ್ಟೋಬರ್ 3 ರಂದು ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ಕೋರಿಕೆ ಕೋರಿದರು. 59ನೇ ಸೆಷನ್ಸ್ ಕೋಟ್ ವಿಚಾರಣೆಯನ್ನು ಆ.3 ಕ್ಕೆ ಮುಂದೂಡಿದೆ.