Saturday, October 3, 2026
ರಾಜ್ಯಸುದ್ದಿ

ಆರಂಭದಲ್ಲಿ ಹಿನ್ನಡೆ, ಕೊನೆಗೆ ಸತತ 8 ಅಂಕ – ಕುಸ್ತಿಯಲ್ಲಿ ಸುಜೀತ್ ಕಲ್ಕಲ್‌ಗೆ ಚಿನ್ನ – ಕಹಳೆ ನ್ಯೂಸ್

ನಗೋಯ: ಭಾರತದ ಉದಯೋನ್ಮುಖ ಕುಸ್ತಿಪಟು ಸುಜೀತ್ ಕಲ್ಕಲ್(Sujeet Kalkal) ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ 2026ರ ಏಷ್ಯನ್ ಗೇಮ್ಸ್‌ನ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇದು ಈ ಬಾರಿಯ ಏಷ್ಯನ್ ಗೇಮ್ಸ್‌ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕವಾಗಿದೆ.
ಫೈನಲ್‌ನಲ್ಲಿ ತಜಕಿಸ್ತಾನದ ಅಬ್ದುಲ್ಮಜೀದ್ ಕುಡೀವ್ ವಿರುದ್ಧ ಆರಂಭದಲ್ಲಿ 2-9 ಅಂತರದಿಂದ ಹಿನ್ನಡೆ ಅನುಭವಿಸಿದ್ದ ಸುಜೀತ್, ನಂತರ ಸತತ 8 ಅಂಕಗಳನ್ನು ಗಳಿಸುವ ಮೂಲಕ ಅದ್ಭುತವಾಗಿ ಪುಟಿದೆದ್ದು ರೋಮಾಂಚಕ ಜಯ ಸಾಧಿಸಿದರು.

ಜಾಹೀರಾತು

23 ವರ್ಷದ ಹರಿಯಾಣ ಮೂಲದ ಸುಜೀತ್ ಕಲ್ಕಲ್, ಈಗಾಗಲೇ U23 ವಿಶ್ವ ಚಾಂಪಿಯನ್‌ಶಿಪ್ (2025) ಮತ್ತು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ (2026) ಕೂಟಗಳಲ್ಲೂ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ 8ನೇ ಸ್ಥಾನದಲ್ಲಿದ್ದ ಭಾರತ(India) ಇಂದು ಒಂದೇ ದಿನ 5 ಚಿನ್ನದ ಪದಕ ಗೆದ್ದ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದೆ. 15 ಚಿನ್ನ, 25 ಬೆಳ್ಳಿ, 35 ಕಂಚಿನ ಪದಕದೊಂದಿಗೆ ಭಾರತ ಒಟ್ಟು 75 ಪದಕಗಳನ್ನು ಪಡೆದಿದೆ.