Friday, April 24, 2026
ಸುದ್ದಿ

ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಕೊರೊನಾ ಪಾಸಿಟಿವ್- ಕಹಳೆ ನ್ಯೂಸ್

ಈಗಾಗಲೇ ಅನೇಕ ಜನಪ್ರತಿನಿಧಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೂ ಕೊರೊನಾ ಪಾಸಿಟಿವ್ ಪಾಸಿಟಿವ್‌ ವರದಿ ಬಂದಿದೆ.

ಈ ಬಗ್ಗೆ ಸ್ವತಃ ಅವರೇ ಟ್ವೀಟ್‌ ಮೂಲಕ ತಿಳಿಸಿದ್ದು, ಕೊರೊನಾ ರೋಗಲಕ್ಷಣಗಳನ್ನು ಕಂಡು ಬಂದ ಹಿನ್ನಲೆಯಲ್ಲಿ, ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದೆ. ಅದರ ವರದಿ ಬಂದಿದ್ದು, ಪಾಸಿಟಿವ್‌ ಆಗಿದೆ. ಆರೋಗ್ಯ ಚೆನ್ನಾಗಿದೆ, ಆದರೆ ವೈದ್ಯರ ಸಲಹೆಯ ಮೇರೆಗೆ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು