Thursday, May 14, 2026
ಸುದ್ದಿ

ಮಧ್ಯಾಹ್ನ ಕೇಳಿಬಂದ ಭಯಾನಕ ಶಬ್ಧಕ್ಕೆ ಬೆಚ್ಚಿ ಬಿದ್ದ ಬೆಂಗಳೂರಿನ ಜನ..! ಆ ಶಬ್ದದ ರಹಸ್ಯವನ್ನು..? – ಕಹಳೆ ನ್ಯೂಸ್

ಬೆಂಗಳೂರು(ಮೇ.20) ಮಧ್ಯಾಹ್ನ ಊಟ ಮಾಡಿ ಆರಾಮಾಗಿ ಕುಳಿತಿದ್ದ ಬೆಂಗಳೂರಿನ ಜನತೆಯನ್ನು ಭಯಾನಕ ಶಬ್ಧವೊಂದು ಬೆಚ್ಚಿ ಬೀಳಿಸಿದೆ. ಸ್ಟೋಟದಂತೆ ಕೇಳಿಬಂದ ಸದ್ದು ಏನೆಂಬುವುದು ಇನ್ನೂ ತಿಳಿದು ಬಂದಿಲ್ಲ.

ಇನ್ನು ಕರ್ನಾಟಕ ನೈಸರ್ಗಿಕ ವಿಪತ್ತು ಕೇಂದ್ರದ ವಿಜ್ಞಾನಿಗಳು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಶಬ್ಧಕ್ಕೇನು ಕಾರಣ ಎಂಬುವುದನ್ನು ಅತೀ ಶೀಘ್ರದಲ್ಲೇ ಪತ್ತೆ ಹಚ್ಚುವುದಾಗಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮಧ್ಯಾಹ್ನ ಸುಮಾರು 1.45ರ ಸುಮಾರಿಗೆ ಈ ಶಬ್ಧ ಬೆಂಗಳೂರಿನ ಬಹುತೇಕ ಕಡೆ ಕೇಳಿ ಬಂದಿದೆ. ಸರ್ಜಾಪುರ, ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ, ಮಾರತ್‌ ಹಳ್ಳಿ, ಇಂಧಿರಾನಗರ, ಹೆಬ್ಬಾಳ ಸೇರಿದಂತೆ ಅನೇಕ ಕಡೆ ಈ ಸದ್ದು ಜನರ ನಿದ್ದೆಗೆಡಿಸಿದೆ.