Saturday, June 13, 2026
ಸುದ್ದಿ

ಬೆಳ್ತಂಗಡಿ ಶಾಸಕ ಬಂಗೇರ ಮೇಲೆ ಹಲ್ಲೆಗೆ ಯತ್ನ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕರಾದ ಕೆ.ವಸಂತ ಬಂಗೇರರ ಕಛೇರಿಯಲ್ಲಿ ವ್ಯಕ್ತಿಯೊವ್ವರು ಅನುಚಿತವಾಗಿ ವರ್ತಿಸಿದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

ಜಾಹೀರಾತು

ಯಾವುದೋ ವಿಚಾರವಾಗಿ ಬೇರೆ ಜನರೊಂದಿಗೆ ಮಾತನಾಡುತ್ತಾ ಶಾಸಕರು ಕುಳಿತಿದ್ದಾಗ ನನಗೆ ಮಾತನಾಡಲು ಅವಕಾಶ ನೀಡಿ ಎಂದು ಪದೇ ಪದೇ ಕೇಳುತ್ತಿದ್ದ. ಅಮೇಲೆ ಮಾತನಾಡಿ, ಈಗ ಕುಳಿತುಕೊಳ್ಳಿ ಎಂದು ಶಾಸಕರು ಹೇಳಿದಾಗ ಅನುಚಿತವಾಗಿ ವರ್ತಿಸಿದ್ದಲ್ಲದೇ, ಕಾಂಗ್ರೆಸ್ ಪಕ್ಷದ ಇನ್ನೊಬ್ಬ ಕಾರ್ಯಕರ್ತನ ಬಗ್ಗೆ ಕುಡಿದ ಮತ್ತಿನಲ್ಲಿ ಅವ್ಯಾಚವಾಗಿ ಬೈದಿದ್ದು ಇದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಹೊರಕಳುಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

https://youtu.be/2SUnUCLrLdI

ಅಲ್ಲಿಂದ ಹೊರ ಬಂದ ಆತ ಅಲ್ಲೇ ಸಮೀಪ ಗುರುನಾರಾಯಣ ಸಭಾದ ಬಳಿ ಕುಳಿತು ಶಾಸಕರಿಗೆ ಅವ್ಯಾಚವಾಗಿ ಬೈದು, ಅವರನ್ನು ಬಿಡುವುದಿಲ್ಲ ಎಂದು ಕೂಗಾಡುತ್ತಿದ್ದ. ಕೊನೆಗೆ ಶಾಸಕರು ಕುಡುಕ ವೆಂಕಪ್ಪ ಕೋಟ್ಯಾನ್ ಬಳಿ ಬಂದು, ನೀನು ಕಾಂಗ್ರೆಸ್ ಕಾರ್ಯಕರ್ತನಾಗಿದ್ದು ಕುಡಿದು ಈ ರೀತಿ ಮಾತಾನಾಡಬಾರದು ಎಂದು ಸಮಾಧಾನ ಪಡಿಸಿದರೂ ಆತ ಕೇಳದೆ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಬಳಿಕ ಸ್ಥಳೀಯರು ಆತನನ್ನು ಹಿಡಿದು ಥಳಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.