Thursday, May 14, 2026
ಸುದ್ದಿ

ಹಿಂದೂಗಳ ಪರ ನಿಂತಿದ್ದಕ್ಕೆ ಜಿಹಾದಿಗಳಿಂದ ಬೆದರಿಕೆ ಕರೆ…! ; ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಬೇಸರ ವ್ಯಕ್ತಪಡಿಸಿ ಸಂಸದೆ ಶೋಭಾ ಕರಂದ್ಲಾಜೆ – ಕಹಳೆ ನ್ಯೂಸ್

ಉಡುಪಿ: ತಬ್ಲಿಘಿಗಳ ವಿರುದ್ಧ ಮಾತನಾಡಿದ್ದಕ್ಕೆ ಹಾಗೂ ಕಳೆದ ಎರಡ್ಮೂರು ದಿನಿಗಳಿಂದ ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದು, ಜಿಹಾದಿಗಳು ಹಲ್ಲೆ ನಡೆಸಿದ್ದಾರೆ. ಹಿಂದೂ ಯುವಕನ ಪರ ನಿಂತಿದ್ದಕ್ಕೆ ನನಗೂ ಬೆದರಿಕೆ ಕರೆ ಮಾಡಿ, ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಕಹಳೆ ನ್ಯೂಸ್ ಜೊತೆ ಮಾತನಾಡಿದ ಅವರು, ಕೇರಳದ ಹಿಂದೂ ಕಾರ್ಯಕರ್ತ ಕೂವೈತ್ ನಲ್ಲಿ ಮೋದಿ ಪರವಾಗಿ ಮಾತನಾಡಿದ್ದಾನೆ. ಇದರಿಂದ ಅಲ್ಲಿನ ಜಿಹಾದಿಗಳು ಆತನ ಮೇಲೆ ಹಲ್ಲೇ ಮಾಡಿದ್ದು, ಕಪಾಳ ಮೋಕ್ಷ ಮಾಡಿದ್ದಾರೆ. ಅಲ್ಲದೆ ಕ್ಷಮೆಯಾಚಿಸಿ, ಫೀಸ್ಬುಕ್‍ನಿಂದ ಪೋಸ್ಟ್ ತಗೆಯುವಂತೆ ಬೆದರಿಕೆ ಹಾಕಿದ್ದಾರೆ. ಈ ಘಟನೆ ಖಂಡಿಸಿ ಟ್ವೀಟ್ ಮಾಡಿದ್ದೆ, ಮಾಧ್ಯಮದವರ ಜೊತೆ ಸಹ ಮಾತನಾಡಿದ್ದೆ. ಅಲ್ಲದೆ ಜಿಹಾದಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದೇನೆ. ಹೀಗಾಗಿ ನನಗೆ ಬದರಿಕೆ ಕರೆ ಮಾಡುತ್ತಿದ್ದಾರೆ. ಅಲ್ಲದೆ ತುಂಬಾ ಅಶ್ಲೀಲವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು