Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ – ಮಳೆ ಎಫೆಕ್ಟ್ : ಪುತ್ತೂರಿನ ಬೆದ್ರಾಳದಲ್ಲಿ ಗ್ಯಾಸ್ ಲಾರಿಯ ಮೇಲೆ ಬಿದ್ದ ಮರ , ರಸ್ತೆಗೆ ಬಿದ್ದ ಕರೆಂಟ್ ಕಂಬ : ಜಿಲ್ಲೆಯಾದ್ಯಂತ ಹಲವಾರು ಹಾನಿ – ಪರಿಸ್ಥಿತಿ ಗಂಭೀರ – ಕಹಳೆ ನ್ಯೂಸ್

ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಭಾರೀ ಗಾಳಿ ಮಳೆಯಾಗ್ತಿದೆ.
ಪರಿಣಾಮ ಕಡಬ, ಮರ್ಧಾಳ, ಬಿಳಿನೆಲೆ, ಪಂಜ, ನೆಲ್ಯಾಡಿ, ಇಚಿಲಂಪಾಡಿ, ಆಲಂಕಾರು, ಆತೂರು ಪರಿಸರದಲ್ಲಿ ಭಾರೀ ಗಾಳಿ ಬೀಸಿದ್ದು, ಹಲವೆಡೆ ಹಾನಿಯಾಗಿರುವ ಸಂಭವವಿದೆ.
ಪುತ್ತೂರಿನ ಬೆದ್ರಾಳ ಎಂಬಲ್ಲಿ ಗ್ಯಾಸ್ ಅಂಡೆ ತುಂಬಿದ್ದ ಲಾರಿ ಮೇಲೆ ಮರ ಉರುಳಿದೆ ಪರಿಣಾಮ ವಾಹನ ಜಕಂಗೊಂಡಿದ್ದು, ರಸ್ತೆಯ ಮೇಲೆ ಕರೆಂಟ್ ಕಂಬ ಬಿದಿದ್ದು, ತೆರವು ಕಾರ್ಯ ನಡೆಯುತ್ತಿದೆ.

ಸುಬ್ರಹ್ಮಣ್ಯದಲ್ಲಿ ಗುಡುಗು ಮಿಶ್ರಿತ ಮಳೆಯಾಗಿದ್ದು ಗಾಳಿಯ ರಭಸವು ಕಡಿಮೆಯಾಗಿತ್ತು. ಭಾರೀ ಗಾಳಿ ಬೀಸಿದ್ದರಿಂದ ಹಲವೆಡೆ ಬಾರೀ ಪ್ರಮಾಣದ ಕೃಷಿ ಹಾನಿಯಾಗಿರುವ ಸಂಭವವಿದೆ.
ಹಾನಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಇದೆ.
ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು –ಸಿಡಿಲಿನ ಆರ್ಭಟದೊಂದಿಗೆ ಭಾರಿ ಮಳೆಯಾಗುತ್ತಿದೆ.









