Sunday, June 14, 2026
ಸುದ್ದಿ

ಬಂಟ್ವಾಳ: ರೈಲು ಹಳಿಯ ಪುಟ್‌‌ಪಾತ್‌‌ನಲ್ಲಿ ಗಂಡಸಿನ ಮೃತದೇಹ ಪತ್ತೆ-ಕಹಳೆ ನ್ಯೂಸ್

ಬಂಟ್ವಾಳ : ರೈಲು ಹಳಿಯ ಪುಟ್‌‌ಪಾತ್‌‌ನಲ್ಲಿ ಗಂಡಸಿನ ಮೃತದೇಹವೊಂದು ಪತ್ತೆಯಾಗಿದ್ದು ಮೃತದೇಹವನ್ನು ರೈಲ್ವೆ ಪೋಲೀಸರು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿರಿಸಿದ್ದಾರೆ.

ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರನ್ನು ಬಿಸಿರೋಡಿನ ಬಿ.ಮೂಡ ಗ್ರಾಮದ ಅಲೆತ್ತೂರು ನಿವಾಸಿ ಮೋಹನ್ ಶೆಟ್ಟಿ (37) ಎಂದು ಗುರುತಿಸಲಾಗಿದೆ.

ಬಿಸಿರೋಡಿನ ರೈಲ್ವೆ ಮೇಲ್ಸೇತಯವೆಯ ಅಡಿ ಭಾಗದಲ್ಲಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುವ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುದು ತನಿಖೆಯ ಬಳಿಕ ತಿಳಿಯಬೇಕಾಗಿದೆ.

ಸುಮಾರು 7.30 ರ ವೇಳೆ ಬಿಸಿರೋಡಿನ ರೈಲ್ವೆ ಮೇಲ್ಸೇತುವೆಯ ಕೆಲಭಾಗದ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಇದನ್ನು ಗಮನಿಸಿದ ಸಾರ್ವಜನಿಕ ರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ತಿಳಿಸಿದ್ದಾರೆ. ನಗರ ಪೋಲೀಸರು ರೈಲ್ವೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೋಲೀಸರು ಮೃತದೇಹವನ್ನು ವೆನ್ಲಾಕ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.