Sunday, June 14, 2026
ಸುದ್ದಿ

ರಾಜ್ಯದ ಉಸೇನ್ ಬೋಲ್ಟ್ ದಾಖಲೆಯನ್ನೇ ಮುರಿದ ನಿಶಾಂತ್ ಶೆಟ್ಟಿ-ಕಹಳೆ ನ್ಯೂಸ್

ಉಡುಪಿ, ಫೆಬ್ರವರಿ 18: ರಾಜ್ಯದ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ವೀರ ಶ್ರೀನಿವಾಸ್ ಗೌಡರ ದಾಖಲೆಯನ್ನು ಮೆಟ್ಟಿ ನಿಂತಿದ್ದಾರೆ ಮತ್ತೊಬ್ಬ ಕಂಬಳ ವೀರ.ಹೌದು ಶ್ರೀನಿವಾಸ್ ಗೌಡರು ಕಂಬಳ ಅಖಾಡದಲ್ಲಿ ದಾಖಲೆ ಮಾಡಿದ ಕೆಲವೇ ದಿನಕ್ಕೆ ದಾಖಲೆಯನ್ನು ಪುಡಿಗಟ್ಟಿದ್ದಾರೆ ಮತ್ತೊಬ್ಬ ಕಂಬಳ ಓಟಗಾರ ನಿಶಾಂತ್ ಶೆಟ್ಟಿ.

ಜಾಹೀರಾತು

ಕಾರ್ಕಳದ ಬಜಗೌಳಿಯ ನಿವಾಸಿ ನಿಶಾಂತ್ ಶೆಟ್ಟಿ ಅವರು ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಅವರು ಶ್ರೀನಿವಾಸ್ ಗೌಡ ಅವರಿಗಿಂತಲೂ ವೇಗವಾಗಿ ಓಡಿ ಹೊಸ ದಾಖಲೆ ಬರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೇಣೂರಿನಲ್ಲಿ ನಡೆದ ಕಂಬಳ ಓಟದಲ್ಲಿ ನಿಶಾಂತ್ ಶೆಟ್ಟಿ ಅವರು 143 ಮೀಟರ್ ದೂರವನ್ನು 13.61 ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಶ್ರೀನಿವಾಸ್ ಗೌಡ ಅವರು 142 ಮೀಟರ್ ದೂರವನ್ನು 13.62 ಸೆಕೆಂಡ್‌ ನಲ್ಲಿ ಓಡಿದ್ದರು. ಶ್ರೀನಿವಾಸ್ ಗೌಡ ಅವರಿಗಿಂತಲೂ ಒಂದು ಮೀಟರ್ ಹೆಚ್ಚಿನ ದೂರವನ್ನು ಒಂದು ಪ್ರಾಕ್ಷನ್ ಆಫ್ ಸೆಕೆಂಡ್ ಕಡಿಮೆ ಸಮಯದಲ್ಲಿ ನಿಶಾಂತ್ ಶೆಟ್ಟಿ ಓಡಿದ್ದಾರೆ.

ಶ್ರೀನಿವಾಸ್ ಗೌಡ ಜೊತೆ ಸ್ಪರ್ಧೆಯಲ್ಲಿ ಓಡಿದ್ದರು
ಐಕಳದ ಕಂಬಳದಲ್ಲಿ ಎರಡನೇ ಸ್ಥಾನ

ಐದಾರು ವರ್ಷದಿಂದ ಕಂಬಳ ಓಟದಲ್ಲಿ ಭಾಗವಹಿಸುತ್ತಿರುವ ನಿಶಾಂತ್ ಶೆಟ್ಟಿ, ಮೊನ್ನೆ ಐಕಳದಲ್ಲಿ ಶ್ರೀನಿವಾಸ್ ಗೌಡ ದಾಖಲೆಯ ಓಟ ಓಡಿದಾಗ ಅವರೊಂದಿಗೆ ಇವರೂ ಸ್ಪರ್ಧೆಯಲ್ಲಿದ್ದು ದ್ವಿತೀಯ ಸ್ಥಾನ ಗಳಿಸಿದ್ದರು.

ಒಬ್ಬರಿಗಿಂತ ಒಬ್ಬರು ವೇಗವಾಗಿ ಓಡುತ್ತಲೇ ಇರುತ್ತಾರೆ: ನಿಶಾಂತ್
ಈ ರೀತಿಯ ವೇಗದ ಓಟಗಳು ಕಂಬಳದಲ್ಲಿ ಸಾಮಾನ್ಯ: ನಿಶಾಂತ್ ಶೆಟ್ಟಿ

ನಿಶಾಂತ್ ಶೆಟ್ಟಿ ಅವರೇ ಹೇಳುವಂತೆ ಈ ರೀತಿಯ ಓಟಗಳು, ಒಬ್ಬರಿಗಿಂತಲೂ ಮತ್ತೊಬ್ಬರು ವೇಗವಾಗಿ ಓಡುವುದು ಕಂಬಳ ಅಂಗಳದಲ್ಲಿ ಸರ್ವೆ ಸಾಮಾನ್ಯ. ಪ್ರತಿ ವರ್ಷವೂ ಒಬ್ಬರಲ್ಲಾ ಒಬ್ಬರು ದಾಖಲೆಗಳನ್ನು ಮುರಿಯುತ್ತಲೇ ಇರುತ್ತಾರೆ ಎಂದಿದ್ದಾರೆ.

ಶಶಿ ತರೂರ್, ಆನಂದ್ ಮಹೀಂದ್ರಾ ಟ್ವೀಟ್
ಖ್ಯಾತನಾಮರಿಂದ ಶ್ರೀನಿವಾಸ್ ಗೌಡ ಗೆ ಪ್ರಶಂಸೆ

ಶ್ರೀನಿವಾಸ್ ಗೌಡ ಅವರು ಉಸೇನ್ ಬೋಲ್ಟ್ ದಾಖಲೆಯನ್ನು ಮುರಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದರು. ಸಂಸದ ಶಶಿ ತರೂರ್, ಉದ್ಯಮಿ ಆನಂದ್ ಮಹೀಂದ್ರಾ ಮತ್ತು ಕೇಂದ್ರ ಸಚಿವ ಕಿರಣ್ ರಿಜುಜು ಶ್ರೀನಿವಾಸ್ ಗೌಡ ಬಗ್ಗೆ ಟ್ವೀಟ್ ಮಾಡಿದ್ದರು.

ಕಾರ್ಮಿಕ ಇಲಾಖೆಯಿಂದ ಭಾರಿ ಬಹುಮಾನ
ಶ್ರೀನಿವಾಸ್‌ ಗೌಡಗೆ ಮೂರು ಲಕ್ಷ ಚೆಕ್

ನಿನ್ನೆ ಶ್ರೀನಿವಾಸ್ ಗೌಡ ಅವರು ಸಿಎಂ ಯಡಿಯೂರಪ್ಪ ಅವರನ್ನೂ ಭೇಟಿ ಆಗಿದ್ದರು. ಸಿಎಂ ಅವರು ಶ್ರೀನಿವಾಸ್ ಗೌಡ ಅವರಿಗೆ ಸನ್ಮಾನ ಮಾಡಿ ಬಹುಮಾನ ನೀಡಿದರು. ಕಾರ್ಮಿಕ ಇಲಾಖೆ ವತಿಯಿಂದ ಮೂರು ಲಕ್ಷ ರೂಪಾಯಿ ಚೆಕ್ ಅನ್ನು ಸಹ ಶ್ರೀನಿವಾಸ್ ಅವರಿಗೆ ನೀಡಲಾಯಿತು.