Wednesday, April 29, 2026
ಸುದ್ದಿ

ದಿನಾಂಕ 14/01/2020ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಮಕರ ಸಂಕ್ರಮಣ” ಹಬ್ಬವನ್ನು ಆಚರಿಸಲಾಯಿತು.- ಕಹಳೆ ನ್ಯೂಸ್

“ಧನುರ್ ಮಾಸದಿಂದ ಮಕರ ಮಾಸಕ್ಕೆ ಸೂರ್ಯ ಪಥ ಬದಲಿಸುತ್ತಿದ್ದಂತೆಯೇ ಉತ್ತರಾಯಣ ಅಡಿಯಿಡುತ್ತದೆ. ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ, ಲೋಕದ ಕರಿರುಳನ್ನು ಹೋಗಲಾಡಿಸುವಂತೆ, ಜನರು ಈ ಪುಣ್ಯಕಾಲದಲ್ಲಿ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಬ್ಬದಂದು ಎಳ್ಳು – ಬೆಲ್ಲ ಹಂಚಿ, ಪರಸ್ಪರ ದ್ವೇಷ ಅಸೂಯೆ, ಶತ್ರುತ್ವಗಳನ್ನೆಲ್ಲ ಮರೆತು ಸಾಮರಸ್ಯದಿಂದ ಬದುಕುವ, ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ” ಎಂದು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಪದವಿ ವಿಭಾಗದ ಕನ್ನಡ ಉಪನ್ಯಾಸಕರಾದ ಯತಿರಾಜ್ ಮಕರಸಂಕ್ರಮಣದ ವಿಶೇಷತೆಯನ್ನು ತಿಳಿಸುತ್ತಾ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ 7ನೇ ತರಗತಿಯ ಅಕ್ಷತಾಲಕ್ಷ್ಮೀ ಪ್ರೇರಣಾ ಗೀತೆ ಹಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ ನೀಡಿ ಮಕರ ಸಂಕ್ರಮಣದ ಶುಭಹಾರೈಸಲಾಯಿತು.
ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಶಾರದಾ ನಿರೂಪಿಸಿ, ರಮ್ಯ ಸ್ವಾಗತಿಸಿ, ಅನುಷಾ ವಂದಿಸಿದರು.