Tuesday, April 28, 2026
ಸುದ್ದಿ

ರಾಷ್ಟ್ರಮಟ್ಟದಲ್ಲಿ ಅತ್ಲೇಟಿಕ್ಸ್‍ನಲ್ಲಿ ಮಿಂಚುಹರಿಸಿದ ಕಡಬದ ಮೋಹನ್ ಕೆರೆಕೋಡಿ – ಕಹಳೆ ನ್ಯೂಸ್

ಕೇರಳದ ಕೊಯಿಕ್ಕೋಡ್‍ನ ಒಲಿಂಪಿಯನ್ ರೆಹಮಾನ್ ಸ್ಟೇಡಿಯಂನಲ್ಲಿ ಜನವರಿ 10ರಿಂದ 12ರವರೆಗೆ ನಡೆದ ಭಾರತ ಮತ್ತು ಶ್ರೀಲಂಕಾವನ್ನೊಳಗೊಂಡ ರಾಷ್ಟ್ರಮಟ್ಟದ ಅತ್ಲೇಟಿಕ್ಸ್‍ನಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕಡಬದ ಮೋಹನ್ ಕೆರೆಕೋಡಿ 800 ಮೀಟರ್ ಓಟದಲ್ಲಿ ಕಂಚು ಪದಕ, 4*400 ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಇದರೊಂದಿಗೆ 100ಮೀಟರ್ ಅಡೆತಡೆ ಓಟದಲ್ಲಿ ಮತ್ತು 400 ಮೀಟರ್ ಓಟದಲ್ಲಿ ಕೆಲ ಸೆಕೆಂಡುಗಳ ಅಂತರದಲ್ಲಿ 4ನೇ ಸ್ಥಾನ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

 

 

ಸುಳ್ಯದ ಐನೆಕಿದುವಿನಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 3 ಚಿನ್ನದ ಪದಕದೊಂದಿಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನವಂಬರ್ 24ರಂದು ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 1 ಚಿನ್ನದ ಪದಕ ಮತ್ತು 2 ಬೆಳ್ಳಿ ಪದಕ ಪಡೆದು ಡಿಸೆಂಬರ್‍ನಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಅತ್ಲೇಟಿಕ್ಸ್‍ನಲ್ಲಿ ಪದಕ ವಿಜೇತರಾಗಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.

ತನ್ನದೆ ಪರಿಶ್ರಮದಿಂದ ನಿರಂತರ ಅಭ್ಯಾಸದ ಮೂಲಕ ಗುರಿ ತಲುಪಿದ ಇವರು ಕಡಬದ ಗ್ರಾಮೀಣ ಭಾಗದಿಂದ ರಾಷ್ಟ್ರಮಟ್ಟದವರೆಗೆ ಬೆಳೆದುನಿಂತಿದ್ದಾರೆ. ಅತ್ಲೇಟಿಕ್ಸ್ ವಿಭಾಗಕ್ಕೆ ಇತ್ತೀಚೆಗೆ ಪಾದಾರ್ಪಣೆಗೈದು ದೊರೆತ ಅವಧಿಯಲ್ಲಿ ಎರಡು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪದಕ ಪಡೆದು ಇದೀಗ ಚೊಚ್ಚಲ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದರೊಂದಿಗೆ ಮಾಸ್ಟರ್ ಗೇಮ್ಸ್ ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಮತ್ತೆ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ತಯಾರಿಯಲ್ಲಿರುವ ಇವರು ಫ್ರೆಬ್ರವರಿ ತಿಂಗಳ 5 ರಿಂದ 10 ರ ವರೆಗೆ ಗುಜರಾತಿನ ವಡೋದರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಅತ್ಲೇಟಿಕ್ಸ್ ನಲ್ಲಿ ಭಾಗವಹಿಸಲಿದ್ದಾರೆ.

ತನ್ನ ಕ್ರೀಡಾ ಅಭಿರುಚಿಯಿಂದ ಕಡಬದ ತನ್ನೂರಿನ ಯುವಕರನ್ನು ಒಗ್ಗೂಡಿಸಿ ಶ್ರೀರಾಮ ಯುವಕಮಂಡಲ ಕಡಬ ಎಂಬ ತಂಡವನ್ನು ರಚಿಸಿ ಸ್ಥಾಪಕಾಧ್ಯಕ್ಷರಾಗಿ ಹಗ್ಗಜಗ್ಗಾಟ ಕ್ಷೇತ್ರದಲ್ಲಿ ತಂಡದ ನಾಯಕನಾಗಿ ಚೊಚ್ಚಲ ಪಂದ್ಯಾಕೂಟದಲ್ಲಿ ಕಾಣಿಯೂರಿನಲ್ಲಿ ಶಿಸ್ತುಬದ್ದ ಪ್ರಶಸ್ತಿಯೊಂದಿಗೆ 5 ವರ್ಷದಲ್ಲಿ 97 ಪ್ರಶಸ್ತಿ ಪಡೆದ ಹೆಮ್ಮೆಗೆ ಪಾತ್ರರಾಗಿರುವ ಇವರು ಸಂಘಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಕಡಬ ತಾಲೂಕು ಗೌಡ ಸಂಘದ ಕ್ರೀಡಾ ಸಂಚಾಲಕರಾಗಿ, ಕಡಬ ತಾಲೂಕು ಶ್ರೀರಾಮ ಸೇನೆಯ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದಾರೆ.