ಉಪ್ಪಿನಂಗಡಿ: ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ವಿವೇಕಾನಂದರ ಜನ್ಮದಿನದ ಪ್ರಯುಕ್ತ ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ- ಕಹಳೆ ನ್ಯೂಸ್

ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ದಿನಾಂಕ 14-01-2020ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ “ಚೈತನ್ಯ ರಾಷ್ಟ್ರೀಯ ಯುವ ದಿನಾಚರಣೆ” ತರಬೇತಿ ಕಾರ್ಯಕ್ರಮವನ್ನು ಶ್ರೀರಾಮ ಶಾಲೆ ವೇದಶಂಕರನಗರ ನಟ್ಟಿಬೈಲು ಇಲ್ಲಿ ಆಯೋಜಿಸಲಾಯಿತು.
ಮುಖ್ಯ ಅತಿಥಿಯಾಗಿ ಶಾಲಾ ಸಂಚಾಲಕರಾದ ಶ್ರೀ ಯು.ಜಿ.ರಾಧ, ತರಬೇತುದಾರರಾಗಿ ವಲಯ ತರಬೇತುದಾರರಾದ ಪ್ರಸ್ತುತ ವಲಯ ಉಪಾಧ್ಯಕ್ಷರಾಗಿರುವ JFPಪ್ರದೀಪ್ ಬಾಕಿಲ,ಶಾಲಾ ಮುಖ್ಯ ಮಾತಾಜಿ ಶ್ರೀಮತಿ ವಿಮಲಾ ಇವರುಗಳು ಉಪಸ್ಥಿತರಿದ್ದರು.ಜೇಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷರಾದ Jc ರಮೇಶ್ ಸುಭಾಷ್ ನಗರ ಇವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷ ಜೆಸಿ ವಿನೀತ್ ಶಗ್ರಿತ್ತಾಯ , ಸ್ಥಾಪಕ ಅಧ್ಯಕ್ಷರಾದ ಜೇಸಿ ಶಿವಕುಮಾರ್ ಬಾರಿತ್ತಾಯ ಉಪಸ್ಥಿತರಿದ್ದರು .ಸದಸ್ಯರಾದ ಜೇಸಿ ವಾಣಿಶ್ರೀ, ಜೇಸಿ ಆಕಾಶ್ ಹಾಗೂ ಶಾಲಾ ಶಿಕ್ಷಕ ಶಿಕ್ಷಕಿ ವೃಂದದವರು, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.









