Tuesday, April 28, 2026
ಸುದ್ದಿ

ಜ.29 ರಂದು ಪಂಜದಲ್ಲಿ ಶ್ರೀದೇವಿ ವೆಲ್ ವಿಷರ್ಸ್ ಸಂಸ್ಥೆ ಲೋಕಾರ್ಪಣೆ ; ಕಟ್ಟಡ ಸಾಮಾಗ್ರಿಗಳ ಕಮಿಷನ್ ಆಧಾರಿತ ಆನ್ ಲೈನ್ ಹೋಲ್ಸೇಲ್ ವ್ಯಾಪಾರದ ಪರಿಕಲ್ಪನೆ – ಕಹಳೆ ನ್ಯೂಸ್

ಪಂಜ : ನಗರದ ಮುಖ್ಯರಸ್ತೆ ಕೃಷ್ಣನಗರದಲ್ಲಿ ಜ.29 ರಂದು ಕಟ್ಟಡ ಸಾಮಾಗ್ರಿಗಳ ಕಮಿಷನ್ ಆಧಾರಿತ ಆನ್ ಲೈನ್ ಹೋಲ್ಸೇಲ್ ವ್ಯಾಪಾರದ ” ಶ್ರೀದೇವಿ ವೆಲ್ ವಿಷರ್ಸ್ ” ಸಂಸ್ಥೆ ಲೋಕಾರ್ಪಣೆಗೊಳ್ಳಲಿದೆ.

ಸಂಜೆ 6.00 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಸಂಕೀರ್ಣದ ಉದ್ಘಾಟನೆಯನ್ನು ಡಾ. ಶಶಿಧರ್ ಹಾಸನಡ್ಕ, ಅಂಗಡಿ ಉದ್ಘಾಟನೆಯನ್ನು ಶ್ರೀಮತಿ ಹೇಮಾವತಿ ಮತ್ತು ಶ್ರೀ ಮುತ್ತಯ್ಯ ಅಂಬೆಕಲ್ಲು ಮಾಡಲಿದ್ದಾರೆ. ಗೋದಾಮಿನ ಉದ್ಘಾಟನೆಯನ್ನು ಗಣೇಶ್ ಪ್ರಸಾದ್ ನಾಯರ್ ಮಾಡಲಿದ್ದು, ಸಭೆಯಲ್ಲಿ ಶ್ರೀಮತಿ ಪದ್ಮಾವತಿ, ಶ್ರೀಯೋಗೀಶ್ ಚಿದ್ಗುಲ್ಲು, ಶ್ರೀ ವಿಶ್ವನಾಥ ಜಾಕೆ ಉಪಸ್ಥಿತರಿರಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮಕ್ಕೆ ಸರ್ವರನ್ನೂ ಆದರದಿಂದ ಶ್ರೀಮತಿ ಪೂರ್ಣಿಮ ಜಾಕೆ ಮತ್ತು ಶ್ರೀದೇವಿಪ್ರಸಾದ್ ಜಾಕೆ ಹಾಗೂ ಕು. ಪೃಥ್ವಿ ಜಾಕೆ, ಮಾ. ಪ್ರಣಮ್ ಜಾಕೆ ಸ್ವಾಗತಿಸಿದ್ದಾರೆ.