
ನವಯುವಕರಿಗೆ ಸ್ವಾಮಿ ವಿವೇಕಾನಂದರು ಎಂದೆಂದಿಗೂ ನವಚೇತನ. “ಏಳಿ ಎದ್ದೇಳಿ,
ಗುರಿಮುಟ್ಟುವವರೆಗೆ ನಿಲ್ಲದಿರಿ” ಎಂದು ಯುವಕರನ್ನು ಉತ್ತೇಜಿಸಿದ, ದೇಶಕಟ್ಟುವಲ್ಲಿ ಯುವಕರ ಮಹತ್ತರ ಹೊಣೆಗಾರಿಕೆಯನ್ನು ತಿಳಿಸಿ ತನ್ನ ಆದರ್ಶ ಚೈತನ್ಯ ತುಂಬುವ ನುಡಿಮುತ್ತುಗಳ ಅಥವಾ ವಾಣಿಯ ಮೂಲಕ ಪ್ರತಿಕ್ಷಣ ಯುವಕರನ್ನು ಹುರಿದುಂಬಿಸುವ ಚೇತನ ವಿವೇಕಾನಂದರು.
ಅವರು ಸಂನ್ಯಾಸಿಯಾದ ಮೇಲೆ ಬದುಕಿದ್ದು ಬರೇ ಐದು ವರ್ಷ. ‘ದೇಶಭಕ್ತ
ವಿಶ್ವಮಾನವ ಭ್ರಾತೃತ್ವ’ವನ್ನು ಸಾರಿದ ವಿವೇಕಾನಂದರ ಮಾತುಗಳನ್ನು ಅನುಷ್ಠಾನಗೊಳಿಸಿ ಅದರ ಮೂಲಕ ದೇಶಸೇವೆ ಮಾಡಿ ಅವರನ್ನು ಗೌರವಿಸೋಣ ಹಾಗೂ ಗುರಿ ಮುಟ್ಟೋಣ ಎಂದು ಅಂಬಿಕಾ ವಿದ್ಯಾಸಮೂಹ ಸಂಸ್ಥೆಯ ಸಂಚಾಲಕರು ವಿದ್ಯಾರ್ಥಿಗಳಲ್ಲಿ ಮಹಾತ್ಮರನ್ನು ಸ್ಮರಿಸುವುದರ ಮೂಲಕ ದೇಶಪ್ರೇಮವನ್ನೂ ಬಲಯುತಗೊಳಿಸುವ ಸಂದೇಶ ಸಾರಿದರು.
ಭಾರತದೇಶ ಪುಣ್ಯಭೂಮಿ, ಭಾರತದಲ್ಲಿ ಜನಿಸಿದ ತತ್ವಜ್ಞಾನಿಗಳು ಶ್ರೇಷ್ಠ ತತ್ವಜ್ಞಾನಿಗಳು ಹಾಗೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತತ್ವಜ್ಞಾನಿಗಳನ್ನು ಜಗತ್ತಿಗೆ ನೀಡಿದ ದೇಶ ಭಾರತ. ಆತ್ಮವಿಶ್ವಾಸದಿಂದ ಏನನ್ನೂ ಸಾಧಿಸಬಹುದು. ನಾವು ದುರ್ಬಲರಲ್ಲ;
ಮೊದಲು ಯೋಚಿಸಿ ಯೋಚಿಸಿದ್ದನ್ನು ಸಾಕಾರಗೊಳಿಸುವ ಛಲ ಕಣಕಣದಲ್ಲೂ ಇರಲಿ ಎಂದು ಕಾಲೇಜಿನ ಪ್ರಾಚಾರ್ಯೆ ರಾಜಶ್ರೀ ನಟ್ಟೋಜ ಅವರು ವಿವೇಕಾನಂದರ ವಾಣಿಯನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾರತದಿಂದ ಶ್ರೇಷ್ಠ ತತ್ವಜ್ಞಾನಿಗಳು ಹುಟ್ಟಿಬರಲಿ. ವಿವೇಕಾನಂದರ ವಾಣಿಯನ್ನು
ಕಾರ್ಯಗತಗೊಳಿಸಿ ದೇಶಪ್ರೇಮಿಗಳಾಗಿ









