Saturday, May 9, 2026
ಸುದ್ದಿ

ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ `ಬಂಪರ್’ : ಶೀಘ್ರವೇ `ಮುಖ್ಯಮಂತ್ರಿ ಅನ್ನಪೂರ್ಣ ಬೆಳೆ ಯೋಜನೆ’ ಜಾರಿ-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದ್ದು, ರೈತರಿಗೆ ದೀರ್ಘಾವಧಿ ಅನುಕೂಲ ಕಲ್ಪಿಸುವ ಸರ್ಕಾರದ ಬಹು ಉದ್ದೇಶಿತ `ಮುಖ್ಯಮಂತ್ರಿ ಅನ್ನಪೂರ್ಣ ಬೆಳೆ ಯೋಜನೆ’ ಜಾರಿಗೆ ಸಿದ್ಧತೆ ನಡೆದಿದೆ.

ರೈತರಿಗೆ ಯೋಗ್ಯ ಬೆಲೆ ಖಾತರಿ, ಆಹಾರ-ಪೌಷ್ಠಿಕ ಭದ್ರತೆ, ಪರಿಸರ ಸಂರಕ್ಷಣೆ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಲ್ಲಿ ಲಭ್ಯ ಖರೀದಿ ವಿಕೇಂದ್ರಿಕರಣ ಲಾಭ ಪಡೆಯುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದಲ್ಲಿ ರೈತರು ಬೆಳೆದ ಆಹಾರ ಧಾನ್ಯಗಳನ್ನು ಸರ್ಕಾರವೇ ಖರೀದಿಸಿ, ಪಡಿತರ ಬಿಸಿಯೂಟ ಹಾಗೂ ಅಂಗನವಾಡಿಗೆ ಪೂರೈಸುವುದು ಯೋಜನೆ ಉದ್ದೇಶವಾಗಿದೆ. ಈ ಮೂಲಕ ಉತ್ಪಾದನೆ, ಉತ್ಪಾದಕತೆ ಹೆಚ್ಚಿ ಸ್ಥಳೀಯ ಆಹಾರ ಪದ್ಧತಿ ಮತ್ತು ಸಂಸ್ಕೃತಿ ಪೋಷಿಸಲು ಸಾಧ್ಯವಾಗಲಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ರಾಜ್ಯದ ಬೆಳೆ ರಾಜ್ಯದಲ್ಲಿಯೇ ಬಳಸುವಂತೆ ರೂಪಿಸಿರುವ ಯೋಜನೆ ಮಾದರಿಯಲ್ಲೇ ಅನ್ನಪೂರ್ಣ ಬೆಳೆ ಯೋಜನೆಯನ್ನು ರೂಪಿಸಲಾಗಿದೆ.