Thursday, May 14, 2026
ಸುದ್ದಿ

ಚಲಿಸುತ್ತಿರುವ ರೈಲಿನಿಂದ ಇಳಿಯಲು ಯತ್ನಿಸಿ ಎರಡೂ ಕಾಲು ಕಳೆದುಕೊಂಡ ಯುವತಿ -ಕಹಳೆ ನ್ಯೂಸ್

ರೈಲಿನಿಂದ ಇಳಿಯುವ ವೇಳೆ ಆತುರ ಬೇಡ, ಅಲ್ಲದೇ ಚಲಿಸುವ ರೈಲಿನಿಂದ ಯಾವುದೇ ಕಾರಣಕ್ಕೂ ಇಳಿಯಲು ಮುಂದಾಗಬೇಡಿ ಎಂದು ಪರಿಪರಿಯಾಗಿ ಅದೆಷ್ಟೇ ಬೇಡಿಕೊಂಡರೂ ಕೇರ್‌ ಮಾಡದ ಜನರು ಇದನ್ನೇ ಪುನರಾವರ್ತನೆ ಮಾಡುತ್ತಲೇ ಇರುತ್ತಾರೆ.

ದೆಹಲಿಯ ನಿಜಾಮುದ್ದೀನ್ ರೈಲ್ವೇ ನಿಲ್ದಾಣದಲ್ಲಿ ಇಂಥದ್ದೇ ಸಾಹಸಕ್ಕೆ ಕೈ ಹಾಕಿದ ಯುವತಿಯೊಬ್ಬಳು ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಘಟನೆ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆಘಾತ ಮೂಡಿಸುವಂತೆ ಇದೆ. ಸದ್ಯ ಯುವತಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್‌) ಚಿಕಿತ್ಸೆ ಪಡೆಯುತ್ತಿದ್ದಾರೆ.