Thursday, May 14, 2026
ಸುದ್ದಿ

BREAKING NEWS ಕಡಬ: ರೈಲಿನಡಿಗೆ ಬಿದ್ದು ಪಂಜದ ಯುವಕ ಮೃತ್ಯು-ಕಹಳೆ ನ್ಯೂಸ್

, ಡಿ.31. ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಡಬ ಸಮೀಪದ ಕೋಡಿಂಬಾಳ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.

ಮೃತ ಯುವಕನನ್ನು ಸುಳ್ಯ ತಾಲೂಕಿನ ಪಂಜ ಸಮೀಪದ ನೇಲ್ಯಡ್ಕ ನಿವಾಸಿ ವಿನೀತ್ ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಿಗ್ಗೆ ಕೋಡಿಂಬಾಳ ರೈಲ್ವೇ ನಿಲ್ದಾಣದ ಪ್ಲಾಟ್ ಫಾರಂ ಬಳಿ ರೈಲು ಢಿಕ್ಕಿ ಹೊಡೆದು ಹಳಿಗೆ ಬಿದ್ದ ಸ್ಥಿತಿಯಲ್ಲಿ ವಿನೀತ್ ನ ಮೃತದೇಹವು ಕಂಡುಬಂದಿದೆ. ಪಕ್ಕದಲ್ಲೇ ಮದ್ಯದ ಬಾಟಲ್ ಕಂಡುಬಂದಿದ್ದು, ಪ್ಲಾಟ್ ಫಾರಂ ನಲ್ಲಿ ಕುಳಿತಿದ್ದ ವೇಳೆ ಆಕಸ್ಮಿಕವಾಗಿ ಕೆಳಗಡೆ ಬಿದ್ದಿದ್ದು, ಈ ವೇಳೆ ರೈಲು ಢಿಕ್ಕಿಯಾಗಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು