Thursday, May 14, 2026
ಸುದ್ದಿ

ವಿಶ್ವ ಕ್ರೀಡಾ ಬಾಲಕಲಾರತ್ನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ರಿತ್ವಿಕ್ ಕೆ.ಪಿ ಬೆಳ್ತoಗಡಿ-ಕಹಳೆ ನ್ಯೂಸ್

ಹೆಸರು.ರಿತ್ವಿಕ್ ಕೆ.ಪಿ ಬೆಳ್ತಂಗಡಿ
ವಯಸ್ಸು.11ವರ್ಷ
ಹುಟ್ಟಿದ ದಿನಾಂಕ.21/4/2008
ಕಲಿಯುತ್ತಿರುವ ಶಾಲೆ.ಪ್ರಸನ್ನ ರೆಸಿಡೆಸ್ನಿಯಲ್
ಬೆಳ್ತಂಗಡಿ
ತಂದೆಯ ಹೆಸರು.ಪ್ರಶಾಂತ್ ಕೆ
ತಾಯಿಯ ಹೆಸರು.ಕೇಶವತಿ
ತಮ್ಮನ ಹೆಸರು. ಚಿರಂತ್ ಕೆ.ಪಿ

ಕರಾಟೆ ನಾಲ್ಕನೆ ತರಗತಿಯಿಂದ ಆರಂಭಿಸಿ ಇಲ್ಲಿಯ ತನಕ ರಾಷ್ಟ್ರ ಮಟ್ಟದಲ್ಲಿ ಒಂದು ಚಿನ್ನ ಮತ್ತು ಬೆಳ್ಳಿ ಮತ್ತು ರಾಜ್ಯಮಟ್ಟದಲ್ಲಿ ಕಟಾ ಹಾಗು ಕುಮಿಟಿ ಎರಡು ವಿಭಾಗಗಳಲ್ಲಿ 4ಚಿನ್ನದ ಪದಕ 1ಕಂಚಿನ ಪದಕ ಗೆದ್ದಿದ್ದಾನೆ.ನ್ರತ್ಯದಲ್ಲಿ ಹಿಪ್ಪಾಪ್ ಕಂಟೆಂಪರಿ ಫ್ರೀಸ್ಟೈಲ್ ಹರ್ಬನ್ ಬಾಲಿವುಡ್ ಲಾಕಿಂಗ್ ಪಾಪಿಂಗ್ ಕಥಕ್ ಮುಂತಾದ ಶೈಲಿಯಲ್ಲಿ ನೃತ್ಯ ಮಾಡುವ ಇವನು ರಿಯಾಲಿಟಿ ಶೋಗಳಾದ ಡೈಜಿವಲ್ಡ್ ಜ್ಯೂನಿಯರ್ ಸೀಜನ್ 1ಮತ್ತು 2ನಲಿ ಭಾಗವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಟಿವಿಯಲ್ಲಿ ಡಾನ್ಸ್ ಟು ಡಾನ್ಸ್ ಇದರಲ್ಲಿ ಫೈನಲ್ ತಲುಪಿದ್ದಾನೆ.

ಬೆಂಗಳೂರಿನಲ್ಲಿ ನಡೆದ ವಿಜೆ ಸ್ಕೂಲ್ ಇಂಟರ್ನ್ಯಾಷನಲ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಿರ್ಪುಗಾರರಿಂದ ಮೆಚ್ಚುಗೆ ಪಡೆದಿದ್ದಾನೆ.
ನೃತ್ಯ ಮತ್ತು ಛದ್ಮವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪಡೆದ ಹಿರಿಮೆ ಈತನಿಗಿದೆ.

ಇಲಿಯ ತನಕ ಇವನು 300 ಅಧಿಕ ವೇದಿಕೆಯಲ್ಲಿ ಪ್ರತಿಭಾ ಪ್ರದರ್ಶನ ನೀಡಿರುತ್ತಾನೆ.

ಯಕ್ಷಗಾನದಲ್ಲಿ ಇವನ ನಟನಚಾತುರ್ಯವನು ಮೆಚ್ಚಿದ ಕಲಾಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಿರುವ ಬಾಲನಟನಾಗಿ ಈಗಾಗಲೇ ನಾಥುರಾಮ್ ಗೊಡ್ಸೆ ಸರ್ಕಾರಿ ಶಾಲೆ ಕರಾಂಬರ್ ಇದರಲ್ಲಿ ಅಭಿನಿಯಿಸಿ ಇನ್ನು ಮುಂದೆ ಬರಲಿರುವ ಎರಡು ಕನ್ನಡ ಚಿತ್ರಕ್ಕೆ ಆಯ್ಕೆಯಾಗಿರುತ್ತಾನೆ.

ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಮೆ ಈತನಿಗಿದೆ

1/1/2020 ರಂದು ಕಲಾವಿದರ ರಕ್ಷಣಾ ವೇದಿಕೆ ಬೆಂಗಳೂರು ಇಲ್ಲಿ ನಡೆಯುವ ರಾಷ್ಟ್ರಮಟ್ಟದ ಪ್ರತಿಭಾ ಪ್ರಶಸ್ತಿ ಪುರಸ್ಕಾರದಲ್ಲಿ ಇವನಿಗೆ ವಿಶ್ವಕ್ರೀಡಾ ರಾಷ್ಟ್ರೀಯ ಬಾಲಕಲಾರತ್ನ ಪ್ರಶಸ್ತಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾನೆ.

ನ್ಯಾಷನಲ್ ಸೆಲ್ಬಿ ಎಕ್ಸಾಮ್ನಲ್ಲಿ ಜಿಲ್ಲಾ ಮಟ್ಟಕ್ಕೆ ತಲುಪಿದ್ದಾನೆ.