
ಪುತ್ತೂರು: ತತ್ವ ಸ್ಕೂಲ್ ಆಫ್ ಪುತ್ತೂರು ಇದರ ಆಶ್ರಯದಲ್ಲಿ ಕ್ರಿಸ್ಮಸ್ ರಜೆಯ ದಿನದಲ್ಲಿ ಮಕ್ಕಳಿಗೆ ವಿಶೆಷ ಶಿಬಿರ ಆಯೋಜಿಸಲಾಗಿದ್ದು ಶಿಬಿರ ಸಂಪನ್ನಗೊಂಡಿದೆ. ಡಿ. 27 ರಿಂದ 29ರ ವರೆಗೆ ಈ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಕ್ಲೇ ಮಾಡಲಿಂಗ್, ಮಣ್ಣಿನ ಮಡಕೆ ತಯಾರಿ, ಗ್ಲಾಸ್ ಪೈಟಿಂಗ್, ಮಾಸ್ಕ್ ತಯಾರಿ ಹಾಗೂ ಪೈಟಿಂಗ್, ಬುಕ್ ಮಾರ್ಕ್ ಬಗ್ಗೆ ತರಬೇತಿ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಚರಣ್ ರಾಜ್ ಆಗಮಿಸಿದ್ದರು. ಈ ವೇಳೆ ರಶ್ಮಿ ಶೆಟ್ಟಿ, ದಿನೇಶ್ ವಿಟ್ಲ ಉಪಸ್ಥಿತರಿದ್ದರು. ಶಿಬಿರವನ್ನು ತತ್ವ ಸ್ಕೂಲ್ ಆಫ್ ಆರ್ಟ್‍ನ ನಿರ್ದೇಶಕ ಟೀಲಾಕ್ಷ ವಿಟ್ಲ ಸಂಯೋಜಿಸಿದರು. ಮಕ್ಕಳ ಉತ್ಸಾಹದಿಂದ ಪಾಲ್ಗೊಂಡರು.









