Thursday, May 14, 2026
ಸುದ್ದಿ

ಇಂದು ಉಪ್ಪಿನಂಗಡಿ ಜೇಸಿಐ ಪದಾಧಿಕಾರಿಗಳ ಪದಗ್ರಹಣ ಸಮಾರಂಭ : ಉಪ್ಪಿನಂಗಡಿ ಸರಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಬಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಜೇಸಿಐ ಉಪ್ಪಿನಂಗಡಿ ಘಟಕ ೨೦೨೦ ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಡಿ. ೩೦ರಂದು ಉಪ್ಪಿನಂಗಡಿ ಸಂಗಮ ಉಪ್ಪಿನಂಗಡಿ ಸರಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಬಾಂಗಣದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಶಶಿಧರ್ ನೆಕ್ಕಿಲಾಡಿ, ಕಾರ್ಯದರ್ಶಿಯಾಗಿ ಜಯಪ್ರಕಾಶ್ ದೇವಶ್ಯ, ಜೇಸಿರೇಟ್ ಅಧ್ಯಕ್ಷೆಯಾಗಿ ಮಮತಾ ಮೋನಪ್ಪ ಗೌಡ, ಜೂನಿಯರ್ ಜೇಸಿ ಅಧ್ಯಕ್ಷರಾಗಿ ಸ್ಮಿತಾ, ಉಪಾಧ್ಯಕ್ಷರಾಗಿ ಕೆ. ವಿಶ್ವನಾಥ್ ಕುಲಾಲ್, ಅವನೀಶ್, ಸಂದೇಶ್ ನಟ್ಟಿಬೈಲು, ಚಂದ್ರಶೇಖರ್ ಶೆಟ್ಟಿ, ಸುಧೀರ್ ಹೆಗ್ಡೆ, ಕೋಶಾಧಿಕಾರಿಯಾಗಿ ಸತೀಶ್ ಹೆಗ್ಡೆ, ಜತೆ ಕಾರ್ಯದರ್ಶಿಯಾಗಿ ಆದರ್ಶ ಕಜೆಕ್ಕಾರ್ , ಜೇಸಿರೇಟ್ ನಿರ್ದೇಶಕರಾಗಿ ಪುಷ್ಪಾತಿಲಕ್, ಜೂನಿಯರ್ ಜೇಸಿ ನಿರ್ದೇಶಕರಾಗಿ ಪ್ರದೀಪ್ ಆಚಾರ್ಯ, ಅಧಿಕಾರ ಸ್ವೀಕರಿಸಲಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾರಂಭದ ಮುಖ್ಯ ಅತಿಥಿಗಳಾಗಿ, ಪುತ್ತೂರಿನ ಶಾಸಕ ಸಂಜೀವ ಮಠಂದೂರು, ಕಹಳೆ ನ್ಯೂಸ್‌ನ ಮುಖ್ಯಸ್ಥ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ, ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ, ಜೇಸಿ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ ಭಾಗವಹಿಸಲಿದ್ದಾರೆಂದು ಜೇಸಿ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನ ಮಜಲು ತಿಳಿಸಿದ್ದಾರೆ.