
ಉಡುಪಿಯ ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥರು ಅಸ್ತಂಗತ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆ ಘೋಷಣೆ ಮಾಡಿದೆ. ಆದ್ದರಿಂದ
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕಿರು ಷಷ್ಠಿ ಪ್ರಯುಕ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಹೊರತು ಪಡಿಸಿ ಕಿರುಷಷ್ಠಿ ಮಹೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಡಿ.29 ರಿಂದ ಡಿ.31 ರವರೆಗೆ ನಡೆಯುವುದಿಲ್ಲ.
ಜ.1 ರ ಧರ್ಮ ಸಮ್ಮೇಳನ ನಿಗದಿಯಂತೆ ನಡೆಯಲಿದೆ. ಎಂದು ದೇವಾಲಯದ ಆಡಳಿತಾಧಿಕಾರಿ ಎಂ ಜೆ ರೂಪಾ ರವರ ಆದೇಶದ ಮೇರೆಗೆ ಕಾರ್ಯನಿರ್ವಹಣಾಧಿಕಾರಿ ಎಂ ಎಚ್ ರವೀಂದ್ರ ತಿಳಿಸಿದ್ದಾರೆ.









