Thursday, May 14, 2026
ಸುದ್ದಿ

ಪೇಜಾವರ ಶ್ರೀಗಳು ನಮ್ಮ ಮನಸ್ಸು, ಹೃದಯದಲ್ಲಿ ಸದಾ ಇರಲಿದ್ದಾರೆ ; ಪೇಜಾವರ ಶ್ರೀ ನಿಧನಕ್ಕೆ ಪ್ರಧಾನಿ ಮೋದಿ, ಅಮಿತ್‌ ಶಾ ಸಂತಾಪ – ಕಹಳೆ ನ್ಯೂಸ್

ಪೇಜಾವರ ಶ್ರೀಗಳ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶ್ರೀಗಳು ನಮ್ಮನ್ನ ಅಗಲಿರಬಹುದು. ಆದ್ರೆ ಅವರ ಮಾರ್ಗದರ್ಶನದಲ್ಲಿ ನಡೀತಿದ್ದ ನಮ್ಮಂತಹ ಲಕ್ಷಾಂತರ ಜನರ ಹೃದಯ ಮತ್ತು ಮನಸ್ಸಲ್ಲಿ ಯಾವತ್ತೂ ಇರಲಿದ್ದಾರೆ. ಸೇವೆ ಮತ್ತು ಆಧ್ಯಾತ್ಮದ ಧೀ ಶಕ್ತಿಯಾಗಿದ್ರು ಶ್ರೀಗಳು. ಸಮಾಜಕ್ಕಾಗಿ ದುಡಿದವರು ಶ್ರೀಗಳು ಅಂತ ವಿಷಾದ ವ್ಯಕ್ತಪಡಿಸಿರೋ ಪ್ರಧಾನಿ ಶ್ರೀಗಳ ಭೇಟಿಯ ಸಮಯದ ಫೊಟೋ ಕೂಡ ಹಂಚಿಕೊಂಡಿದ್ದಾರೆ.

ವಿಶ್ವೇಶ್ವರ ತೀರ್ಥ ಶ್ರೀಗಳನ್ನ ಭೇಟಿಯಾಗಿ, ಅವರಿಂದ ಕಲಿಯುವಂತಹ ಸುವರ್ಣಾವಕಾಶ ನನಗೆ ಸಿಕ್ಕಿತ್ತು. ಇತ್ತೀಚೆಗೆ ಗುರು ಪೂರ್ಣಿಮೆಯಂದು ನಾನು ಅವರನ್ನು ಭೇಟಿಯಾಗಿದ್ದೆ. ಆ ದಿನ ಯಾವತ್ತೂ ನನ್ನ ನೆನಪಿನಲ್ಲಿ ಉಳಿಯುವಂಥಾದ್ದು ಅಂತ ಶ್ರೀಗಳ ಜೊತೆಗಿನ ತಮ್ಮ ಭೇಟಿಯ ನೆನಪನ್ನ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಗೃಹ ಸಚಿವ ಅಮಿತ್‌ ಶಾ ಕೂಡ ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ್ದು ಶ್ರೀಗಳ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು. ಮಾನವೀಯತೆ, ದಯೆ, ಜ್ಞಾನಕ್ಕೆ ಮತ್ತೊಂದು ಹೆಸರಾಗಿದ್ರು ಶ್ರೀಗಳು. ಸಮಾಜದ ಒಳಿತಿಗಾಗಿ ಅವರು ಮಾಡಿದ ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಅವರ ಅಗಲಿಗೆ ಆಧ್ಯಾತ್ಮ ಲೋಕಕ್ಕೆ ತುಂಬಲಾರದ ನಷ್ಟ ಅಂತ ವಿಷಾಧ ವ್ಯಕ್ತಪಡಿಸಿದ್ದಾರೆ.