
ಕಡಬ : ಕಡಬ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾದ ಪ್ರಕರಣವನ್ನು ನಾಲ್ಕೇ ದಿನದಲ್ಲಿ ಪತ್ತೆ ಹಚ್ಚಿದ ಕಡಬ ಪೊಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೊಯಿಲ ಗ್ರಾಮದ ಬಡ್ಲಮೆ ಮನೆಯ ಶ್ರೀಮತಿ ರತ್ನಾವತಿ ಎಂಬವರು ಕಾಣೆಯಾಗಿರುವ ಬಗ್ಗೆ ಆಕೆಯ ಪತಿ ಗಿರಿಯಪ್ಪ ಎಂಬವರು ಡಿಸೆಂಬರ್ 24 ರಂದು ಕಡಬ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ ಎಸ್.ಐ ರುಕ್ಮ ನಾಯ್ಕ ಅವರ ನೇತೃತ್ವದ ತಂಡ
ರತ್ನವತಿಯವರನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದು, ಪುತ್ತೂರಿನ ಆನಂದ ಆಶ್ರಮದಲ್ಲಿ ಈಕೆ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ನಾಪತ್ತೆ ಪ್ರಕರಣವನ್ನು ಸುಖಾಂತ್ಯ ಗೊಳಿಸಿದ್ದಾರೆ.ಪ್ರಕರಣ ಭೇದಿಸಿದ ತಂಡದಲ್ಲಿ ASI ಸುರೇಶ್, ASI ಚಂದ್ರಶೇಖರ್ ,ಹೆಡ್ ಕಾನ್ಸ್ಟೇಬಲ್ ತಾರನಾಥ್, ಕಾನ್ಸ್ಟೇಬಲ್ ಭವಿತ್ ರೈ, ಗೃಹರಕ್ಷಕ ದಳದ ರತೀಶ್ ಪಾಲ್ಗೊಂಡಿದ್ದರು.









