Sunday, June 14, 2026
ಸುದ್ದಿ

ಒಬ್ಬರೂ ಸಾಯ್ತಿಲ್ವಲ್ಲಾ’ ಎಂದಿದ್ದ ಇನ್ಸ್ ಪೆಕ್ಟರ್ ಕರ್ತವ್ಯದಿಂದ ಬಿಡುಗಡೆ-ಕಹಳೆ ನ್ಯೂಸ್

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶದಾದ್ಯಂತ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿಯಾಗಿದ್ದರು.

ಜಾಹೀರಾತು

ಈ ಗೋಲಿಬಾರ್ ಕುರಿತಂತೆ ಇದೀಗ ತನಿಖೆಗೆ ಆದೇಶಿಸಲಾಗಿದ್ದು, ಇದರ ಮಧ್ಯೆ ಗೋಲಿಬಾರ್ ನಡೆಸಿದ ಸಂದರ್ಭದಲ್ಲಿ ಇನ್ಸ್ ಪೆಕ್ಟರ್ ಒಬ್ಬರು ‘ಫೈಯರ್ ಮಾಡಿದ್ರೆ ಒಂದು ಗುಂಡೂ ಬೀಳಲಿಲ್ವ ? ಒಬ್ಬರು ಸಾಯ್ತಿಲ್ವಲ್ಲಾ’ ಎಂದು ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ವಿವರಣೆ ಕೇಳಿದ ಸಂದರ್ಭದಲ್ಲಿ ಈ ಮಾತನಾಡಿದ್ದ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಾಂತಾರಾಮ, ಗಾಳಿಯಲ್ಲಿ ಗುಂಡು ಹಾರಿಸಿದರೆ ಮನೆಗಳ ಮಹಡಿಯಲ್ಲಿದ್ದವರಿಗೆ ತಗಲಬಹುದು ಎಂದು ಪೇದೆಯೊಬ್ಬರು ಹೇಳಿದ ಮಾತಿಗೆ ಆ ರೀತಿ ಪ್ರತಿಕ್ರಿಯಿಸಿದ್ದಾಗಿ ಸಮಜಾಯಿಷಿ ನೀಡಿದ್ದರು.

ಇದೀಗ ಶಾಂತಾರಾಮ ಅವರನ್ನು ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ. ಪಿ.ಎಸ್. ಹರ್ಷ ಆದೇಶಿಸಿದ್ದಾರೆ.