
ಚಿತ್ರದುರ್ಗ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಮೈದುನನ ಕಿರುಕುಳದಿಂದ ಅತ್ತಿಗೆ ನೇಣಿಗೆ ಶರಣಾಗಿದ್ದಾರೆ. ಜ್ಯೋತಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ.
ಮೈದುನನ ದೌರ್ಜನ್ಯದಿಂದ ಬೇಸತ್ತು ಅತ್ತಿಗೆ ಜ್ಯೋತಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕಾರು ಚಾಲಕ ಪ್ರಭುಲಿಂಗ ನೀಡಿದ ಕಿರುಕುಳವೇ ಜ್ಯೋತಿ ಆತ್ಮಹತ್ಯೆಗೆ ಕಾರಣವೆಂಬ ಆರೋಪ ಕೇಳಿ ಬಂದಿದೆ.
ಮೈದುನ ಪ್ರಭುಲಿಂಗ ಮನೆಗೆ ವಿದ್ಯುತ್, ನೀರು ಸರಬರಾಜು ಕಡಿತಗೊಳಿಸಿ ಕಿರುಕುಳ ನೀಡಿದ್ದರೆನ್ನಲಾಗಿದೆ. ಪ್ರಭುಲಿಂಗ ವಿರುದ್ಧ ದರ್ಪ, ದೌರ್ಜನ್ಯ ತೋರಿದ ಆರೋಪ ಕೇಳಿಬಂದಿದ್ದು, ಆತನ ಬಂಧನಕ್ಕೆ ಮೃತ ಜ್ಯೋತಿ ಸಂಬಂಧಿಕರು ಒತ್ತಾಯಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.











