
ಬೆಂಗಳೂರಿನಲ್ಲಿ ಕೊಲೆ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಜಾಲಹಳ್ಳಿಯಲ್ಲಿ ಆರೋಪಿ ಬಾಬು 2 ಕಾಲಿಗೆ ಗುಂಡೇಟು ತಗುಲಿದೆ.
ಮಹಾಲಕ್ಷ್ಮಿಲೇಔಟ್ ಪಿಎಸ್‌ಐ ವೆಂಕಟರಮಣ ಫೈರಿಂಗ್ ಮಾಡಿದ್ದಾರೆ. ನಂದಿನಿ ಲೇಔಟ್ ನಲ್ಲಿ ಕ್ಯಾಬ್ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಬಾಬು ಬಂಧಿಸಲು ಪೊಲೀಸರು ತೆರಳಿದ್ದು, ಈ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ ಬಾಬು ಪರಾರಿಯಾಗಲು ಯತ್ನಿಸಿದ್ದಾನೆ.
ಆತನಿಗೆ ಶರಣಾಗಲು ತಿಳಿಸಿ ಗಾಳಿಯಲ್ಲಿ ಒಂದು ಸುತ್ತು ಫೈರಿಂಗ್ ಮಾಡಲಾಗಿದೆ. ಪೊಲೀಸರ ಮಾತು ಲೆಕ್ಕಿಸದೆ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಬಾಬು ಎರಡು ಕಾಲಿಗೆ ಶೂಟ್ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ಬಾಬುನನ್ನು ಜಾಲಹಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.











