ಪುತ್ತೂರು: ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆ ಬಲವಾದ ಉದ್ದೇಶ ಇದ್ದೇ ಇರುತ್ತದೆ. ಆದರೆ ಅದನ್ನು ಗಣನೆಗೆ ತಗೆದುಕೊಳ್ಳದೆ ಕೆಲಸ ಮಾಡುತ್ತೇವೆ. ಪ್ರತಿಯೊಂದು ಕೆಲಸ ನಮಗೆ ಫಲಕೊಡಬೇಕಾದರೆ ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇರಬೇಕು ಎಂದು ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅರವಿಂದ ಕುಡ್ಲ ಹೇಳಿದರು.
ಅವರು ಸಾಜ ಸರಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ನಡೆಯುತ್ತಿರುವ ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಚಿತ್ರಗ್ರಹಣ’ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಶುಕ್ರವಾರ ಮಾತನಾಡಿದರು.
ನಾವು ಕಾಣುವಂತಹ ಕನಸುಗಳು ಭವಿಷ್ಯಕ್ಕೆ ಪೂರಕವಾಗುವಂತಿರಬೇಕು. ಕಂಡಂತಹ ಕನಸುಗಳನ್ನು ನನಸಾಗಿಸುವಾಗ ಜೀವನಕ್ಕೆ ಬೇಕಾದ ಎಲ್ಲಾ ಪಾಠಗಳನ್ನು ಕಲಿಯುತ್ತೇವೆ. ಹಾಗೆಯೇ ಚಿತ್ರಗ್ರಹಣವು ಇಂದು ಹಲವು ಮಂದಿಗೆ ಹವ್ಯಾಸವಾಗಿದೆ. ಇಂತಹ ಹವ್ಯಾಸವೇ ಹಲವರ ಜೀವನಕ್ಕೆ ದಾರಿದೀಪವಾಗಿದೆ ಎಂದರಲ್ಲದೆ ಮೊಬೈಲ್ ಅನ್ನು ನಾವು ಬಳಸಬೇಕೇ ಹೊರತು ಮೊಬೈಲ್ ನಮ್ಮನ್ನು ಬಳಸಬಾರದು. ಏಕೆಂದರೆ ಗುರಿಯನ್ನು ಸಾಧಿಸುವಲ್ಲಿ ನಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಆಗ ಮಾತ್ರ ಬದುಕಿನ ಚಿತ್ರಣ ಮೂಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಸೆಂಟ್ರಲ್ ಪುತ್ತೂರಿನ ಅಧ್ಯಕ್ಷ ರೋ.ಸಂತೋಷ್ ಶೆಟ್ಟಿ ಸಾಜ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಸೇವಾ ಮನೋಭಾವನೆಯಿಂದ ತೊಡಗಿಸಿಕೊಳ್ಳಬೇಕು. ಶಿಬಿರದಲ್ಲಿ ಕಲಿತ ಅನುಭವದ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಯಶಸ್ಸು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಪುತ್ತೂರು ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣ ನಾಯ್ಕ ಅಂಬಟೆತ್ತಡ್ಕ, ಬಲ್ನಾಡು ಗ್ರಾ.ಪಂ. ಸದಸ್ಯ ಟಿ. ಇದ್ದುಕುಂಞÂ ಹಾಜಿ, ದೈವ ನರ್ತಕ ಕುಟ್ಟಿ ನಲಿಕೆಕೂಟೇಲು, ಆರ್ಯಾಪು ಗ್ರಾಮ ಸಹಾಯಕ ಉಮೇಶ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳಾದ ಧನ್ಯಶ್ರೀ, ರಶ್ಮಿಕಾ, ಧನ್ಯಶ್ರೀ ಪ್ರಾರ್ಥಿಸಿದರು. ಶಿಬಿರಾರ್ಥಿ ಮಲ್ಲಿಕಾ ಸ್ವಾಗತಿಸಿ, ಆತ್ಮಿಕಾ ವಂದಿಸಿದರು. ಶಿಬಿರಾರ್ಥಿ ಅಕ್ಷಯ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
You Might Also Like
ಹಿಂದೂ ಎಕನಾಮಿಕ್ ಫೋರಂ ಮತ್ತು ಮುಳಿಯ ಮ್ಯಾನೇಜ್ಡ್ ಫಾರ್ಮ್ ಲ್ಯಾಂಡ್ ವತಿಯಿಂದ ಸಮಗ್ರ ಮಲ್ಲಿಗೆ ಕೃಷಿ ತರಬೇತಿ -ಕಹಳೆ ನ್ಯೂಸ್
ಪುತ್ತೂರು : ಹಿಂದೂ ಎಕನಾಮಿಕ್ ಫೋರಂ ಮತ್ತು ಮುಳಿಯ ಮ್ಯಾನೇಜ್ಡ್ ಫಾರ್ಮ ಲ್ಯಾಂಡ್ ವತಿಯಿಂದ ಜು. 14 ರಂದು ಸಮಗ್ರ ಮಲ್ಲಿಗೆ ಕೃಷಿ ನಿರ್ವಹಣೆ ಮತ್ತು ಮಾರುಕಟ್ಟೆ...
ಯುವವಾಹಿನಿ (ರಿ.) ಮಾಣಿ ಘಟಕದಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮ – ಕಹಳೆ ನ್ಯೂಸ್
ಕಲ್ಲಡ್ಕ : ಯುವವಾಹಿನಿ (ರಿ.) ಮಾಣಿ ಘಟಕದಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮದ ಅಂಗವಾಗಿ ವಿವಿಧ ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಿಡ ನೆಡುವ...
ಮಂತ್ರಾಲಯದಲ್ಲಿ ಜೋರು ಮಳೆ; ರಾತ್ರಿಯೆಲ್ಲಾ ಪರದಾಡಿದ ರಾಯರ ಭಕ್ತರು -ಕಹಳೆ ನ್ಯೂಸ್
ರಾಯಚೂರು: ಮಂತ್ರಾಲಯದಲ್ಲಿ ರಾತ್ರಿಯಿಡಿ ಜೋರು ಮಳೆ ಸುರಿದಿದ್ದು, ಗುರು ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಬಂದು ರಾತ್ರಿ ತಂಗಿದ್ದ ಭಕ್ತರು ರಾತ್ರಿಯೆಲ್ಲಾ ಪರದಾಡಿದ್ದಾರೆ. ವೀಕೆಂಡ್ ಹಿನ್ನೆಲೆ ರಾಯರ ಮಠಕ್ಕೆ...
ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕ -ಕಹಳೆ ನ್ಯೂಸ್
ನವದೆಹಲಿ: ಭಾರತದ ಮುಂದಿನ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಧೀರಜ್ ಸೇಠ್ ಅವರು ಜೂನ್ 30 ರಂದು ಅಧಿಕಾರ...











