Recent Posts

Saturday, May 9, 2026
ಸುದ್ದಿ

ಪುತ್ತೂರಿನ ಜನಪ್ರಿಯ ಇಲೆಕ್ಟ್ರಾನಿಕ್ಸ್ ಮಳಿಗೆಯಾದ ಶೇಟ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಪ್ರಯುಕ್ತ ಗ್ರಾಹಕರಿಗಾಗಿ ವ್ಯಾಪಕ ಶ್ರೇಣಿಯಲ್ಲಿ ಗ್ರೇಟ್ ಸೇಲ್ ಹಮ್ಮಿಕೊಂಡಿದೆ -ಕಹಳೆ ನ್ಯೂಸ್

ಪುತ್ತೂರಿನ ಜನಪ್ರಿಯ ಇಲೆಕ್ಟ್ರಾನಿಕ್ಸ್ ಮಳಿಗೆಯಾದ ಶೇಟ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಪ್ರಯುಕ್ತ ಗ್ರಾಹಕರಿಗಾಗಿ ವ್ಯಾಪಕ ಶ್ರೇಣಿಯಲ್ಲಿ ಗ್ರೇಟ್ ಸೇಲ್ ಹಮ್ಮಿಕೊಂಡಿದೆ.ಪುತ್ತೂರು ತಾಲೂಕು ಆಫೀಸ್ ರಸ್ತೆಯಲ್ಲಿರುವ ಜನಪ್ರಿಯ ಇಲೆಕ್ಟ್ರಾನಿಕ್ಸ್ ಮಳಿಗೆಯಾದ ಶೇಟ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಗ್ರೇಟ್ ಸೇಲ್ ಪ್ರಾರಂಭಿಸಿದ್ದು ಗ್ರಾಹಕರಿಗೆ ಬಂಪರ್ ಬಹುಮಾನಗಳನ್ನು ತಮ್ಮದಾಗಿಸುವ ಸುವರ್ಣಾವಕಾಶ ಇಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಶೇಟ್ ಇಲೆಕ್ಟ್ರಾನಿಕ್ಸನ ದೀಪಾವಳಿ ಗ್ರೇಟ್ ಸೇಲ್ ಹಬ್ಬದ ಆಫರ್‍ಗಳ ಕಾರ್ಯಕ್ರಮವನ್ನು ಚಿತ್ರ ನಟಿ ನಿರೀಕ್ಷಾ ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಟಿ ನಿರೀಕ್ಷಾ ಶೆಟ್ಟಿ ದೀಪಾವಳಿ ಹಬ್ಬದ ಪ್ರಯುಕ್ತ ಶೇಟ್ ಇಲೆಕ್ಟ್ರಾನಿಕ್ಸ್ ಭರ್ಜರಿ ಆಫರ್ ನೀಡಿದ್ದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.


ಇನ್ನು ಇನ್ನರ್ ವೀಲ್ ಕ್ಲಬ್‍ನ ಅಧ್ಯಕ್ಷೆ ಸಹನಾ ಭಾವಿನ್ ಅತ್ಯಾಕರ್ಷಕ ಬೆಲೆಯ ನೂತನ ಎಲ್‍ಇಡಿ ಟಿವಿಯನ್ನ ಲಾನ್ಚ್ ಮಾಡಿ ಸೇಲ್ಸ್ ಮತ್ತು ಸರ್ವೀಸ್‍ನಲ್ಲಿ ಶೇಟ್ ಇಲೆಕ್ಟ್ರಾನಿಕ್ಸ್ ಪುತ್ತೂರಿನಲ್ಲೆ ನಂಬರ್ ಒನ್ ಸ್ಥಾನಗಳಿಸಿದೆ.ನೂತನವಾದ ಎಲ್‍ಇಡಿ ಟಿವಿ ಶೇ.50 ರಷ್ಟು ಆಫರ್ ಆಗಿ ನೀಡಿದ್ದು ಹೆಚ್ಚಿನ ಸಂಖ್ಯೆಯ ಗ್ರಾಹಕರು ಇದನ್ನು ತಮ್ಮದಾಗಿಸಿಕೊಳ್ಳಬಹುದೆಂದರು.


ಈ ದೀಪಾವಳಿ ಹಬ್ಬದಂದು ನಿಮ್ಮ ಅದೃಷ್ಟ ಪರೀಕ್ಷಿಸಲು ಶೇಟ್ ಎಲೆಕ್ಟ್ರಾನಿಕ್ಸ್‍ನಲ್ಲಿದೆ ಅದ್ಭುತ ಅವಕಾಶಗಳಿದ್ದು ಹಲವಾರು ವರ್ಷಗಳಿಂದ ಪುತ್ತೂರು ಜನತೆಯ ಮನೆಮಾತಾಗಿರುವ ವಿಶಾಲವಾದ ಶೋರೂಮ್‍ನಲ್ಲಿದೆ ಜಗತ್ಪ್ರಸಿದ್ಧ ಬ್ರಾಂಡ್‍ಗಳ ವಿಶಾಲ ಶ್ರೇಣೀಯ,ಅತ್ಯುತ್ತಮ ಗುಣಮಟ್ಟ,ವಿನಿಮಯ ಕೊಡುಗೆಯ ಬಂಪರ್ ಆಫರ್ ಗ್ರಾಹರಿಗಾಗಿ ಲಭ್ಯವಿದೆ.

ಇನ್ನು 2000 ರೂ ಮೇಲ್ಪಟ್ಟ ಪ್ರತಿ ಖರೀದಿಗೆ ಕೂಪನ್ ಪಡೆಯುವ ಅವಕಾಶವಿದ್ದು , ಬಜಾಜ್ ಫೈನಾನ್ಸ್ ಲೋನ್ ಮೇಳದಲ್ಲಿ ಬಹುಮಾನ ಯೋಜನೆಗಳ ಜೊತೆಗೆ 3 ತರಹದ ಯೋಜನೆಗಳ ಅವಕಾಶ ಗ್ರಾಹಕರಿಗೆ ಲಭ್ಯವಿದೆ.ಉತ್ತಮ ಸರ್ವಿಸ್ ನೊಂದಿಗೆ ಪ್ರತಿ ಖರೀದಿಗೆ ಚಿನ್ನದ ನಾಣ್ಯ ಹಾಗೂ ಬೆಳ್ಳಿ ನಾಣ್ಯದ ಜೊತೆಗೆ ದ್ವಿಚಕ್ರ ವಾಹನ ಜ್ಯುಪಿಟರ್ ನ್ನು ತಮ್ಮದಾಗಿಸಿಕೊಳ್ಳಬಹುದು. 0% ಸುಲಭ ಕಂತುಗಳ ಸಾಲ,ಶೂನ್ಯ ಡೌನ್‍ಪೇಮೆಂಟ್,ಸ್ಥಳದಲ್ಲಿ ಲೋನ್,ಉಚಿತ ಉಡುಗೊರೆ,ಉಚಿತ ಕ್ಯಾಶ್‍ಕಾರ್ಡ್,ಕಾಂಬಿ ಆಫರ್,ಎಕ್ಸ್ ಚೇಂಜ್ ಆಫರ್,ವಿಸ್ತøತ ವಾರೆಂಟಿ,ಫ್ರೀ ಹೋಮ್ ಡೆಲಿವೆರಿಯೊಂದಿಗೆ ದೀಪಾವಳಿಯ ಧಮಾಕಾ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

ಆಕರ್ಷಕ ಯೋಜನೆಗಳೊಂದಿಗೆ ಈ ದೀಪಾವಳಿ ಹಬ್ಬದಂದು ಬಂಪರ್ ಬಹುಮಾನಗಳೊಂದಿಗೆ ಆನಂದಿಸಲು ಶೇಟ್ ಇಲೆಕ್ಟ್ರಾನಿಕ್‍ಲ್ಲಿ ದೀಪಾವಳಿ ಗ್ರೇಟ್ ಸೇಲ್ ಆಫರ್ ಬಹುಮಾನಗಳ ಸುರಿಮಳೆಗಳನ್ನೆ ನೀಡುತ್ತಿದೆ.ಈ ಪ್ರಯೋಜನ ಕೇವಲ ಪುತ್ತೂರು ಜನತೆಗಷ್ಟೆಯಲ್ಲದೆ ಆಸುಪಾಸಿನ ಸ್ಥಳೀಯ ಊರಿನವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.ಇನ್ನು ಕಾರ್ಯಕ್ರಮದಲ್ಲಿ ವಿಶ್ವಾಸ್ ಶೆಣೈ, ದೀಪಕ್ ರೈ, ಸಮೀರ್, ಗುರು, ರಾಮ್ ಗಿರೀಶ್ ಹಾಗೂ ಇನ್ನಿತರರು ಉಪಸ್ಧಿತರಿದ್ದರು.