Recent Posts

Wednesday, May 6, 2026
ಸುದ್ದಿ

LOC ಬಳಿ 2 ಸಾವಿರ ಸೈನಿಕರನ್ನು ನಿಯೋಜಿಸಿದ ಪಾಕಿಸ್ತಾನ..! – ಕಹಳೆ ನ್ಯೂಸ್

ನವದೆಹಲಿ : ಕಾಶ್ಮೀರ ನೆಪದಲ್ಲಿ ಭಾರತವನ್ನು ಪದೇ ಪದೇ ಕೆಣಕುತ್ತಿರುವ ಪಾಕಿಸ್ತಾನ, ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜನೆ ಮಾಡಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ, ಪಾಕ್ ಸುಮಾರು ಸಾವಿರ ಸೈನಿಕರನ್ನು ನಿಯೋಜನೆ ಮಾಡಿದೆ. ಎಲ್‍ಒಸಿಯ ಬಾಘ್ ಮತ್ತು ಕೊಟ್ಲಿ ಸೆಕ್ಟರ್’ನಲ್ಲಿ 2 ಸಾವಿರ ಸೈನಿಕರನ್ನು ಜಮಾವಣೆ ಮಾಡಿದ್ದು, ಪಾಕ್ ಸೇನೆಯ ಚಟುವಟಿಕೆಗಳ ಮೇಲೆ ಭಾರತೀಯ ಸೇನೆ ತೀವ್ರ ನಿಗಾ ಇರಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು