Tuesday, April 28, 2026
ಸುದ್ದಿ

ಮಗನ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಡಿ.ಕೆ. ಶಿವಕುಮಾರ್ ತಾಯಿ ಗೌರಮ್ಮ- ಕಹಳೆ ನ್ಯೂಸ್

ರಾಮನಗರ: ಗಣೇಶ ಹಬ್ಬದ ದಿನವೂ ಜಾರಿ ನಿರ್ದೇಶನಾಲಯ ಕಚೇರಿಗೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಚರಣೆಗೆ ಹಾಜರಾಗಿದ್ದಾರೆ.

ಡಿ.ಕೆ. ಶಿವಕುಮಾರ್ ಮತ್ತು ಸಹೋದರ ಡಿ.ಕೆ. ಸುರೇಶ್ ದೆಹಲಿಯಲ್ಲಿ ಇರುವುದರಿಂದ ಇಂದು ನಡೆಯಬೇಕಿದ್ದ ಅವರ ತಂದೆ ಕಾರ್ಯವನ್ನು ಡಿಕೆಶಿ ಪುತ್ರ ಆಕಾಶ್ ನೆರವೇರಿಸಲಿದ್ದಾರೆ. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಡಿ.ಕೆ. ಶಿವಕುಮಾರ್ ಭಾವುಕರಾಗಿದ್ದನ್ನು ಕಂಡ ಅವರ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಬಿಜೆಪಿಯವರಿಂದಲೇ ಷಡ್ಯಂತ್ರ ರೂಪಿಸಲಾಗಿದೆ. ನನ್ನ ಮಗನ ಏಳಿಗೆ ಸಹಿಸದೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ದೊಡ್ಡಆಲನಹಳ್ಳಿಯಲ್ಲಿ ಮಾತನಾಡಿದ ಅವರು, ನಾವು ಯಾರಿಗೂ ಮೋಸ ಮಾಡಿಲ್ಲ. ಯಾರ ದುಡ್ಡು ಹೊಡೆದಿಲ್ಲ. ನನ್ನ ಮಗನ ಏಳಿಗೆ ಸಹಿಸದೆ ಹೀಗೆಲ್ಲಾ ಮಾಡುತ್ತಿದ್ದಾರೆ. ಇಡಿ ಅಧಿಕಾರಿಗಳಿಗೆ ಕರುಣೆ ಎನ್ನುವುದೇ ಇಲ್ಲ ಎಂದು ದೂರಿದ್ದಾರೆ.

ನಾವು ಈಗ ಶ್ರೀಮಂತರಾದವರಲ್ಲ, ಹಿಂದಿನಿಂದಲೂ ನಾವು ಶ್ರೀಮಂತರು ಎಂದು ಹೇಳಿದ ಗೌರಮ್ಮ, ದೆಹಲಿಯಲ್ಲಿ ಮಗ ಕಣ್ಣೀರಿಟ್ಟಿದ್ದನ್ನು ಕಂಡು ಭಾವುಕರಾಗಿ ಅತ್ತಿದ್ದಾರೆ. ಡಿಕೆಶಿ ಮತ್ತು ಡಿ.ಕೆ. ಸುರೇಶ್ ದೆಹಲಿಯಲ್ಲಿರುವುದರಿಂದ ಅವರ ತಂದೆಯ ಕಾರ್ಯವನ್ನು ಮೊಮ್ಮಗ ನೆರವೇರಿಸುವುದಾಗಿ ಗೌರಮ್ಮ ಹೇಳಿದ್ದಾರೆ.