
ಕಡಬ: ಮಾನಸಿಕ ಯುವತಿಯೋರ್ವಳು ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಕಡಬದ ಬಲ್ಯದಲ್ಲಿ ನಡೆದಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಸುಮಿತ್ರಾ (41) ಎಂಬಾಕೆ ಮೃತಪಟ್ಟ ದುರ್ದೈವಿ.
ತೋಟಕ್ಕೆ ಹುಲ್ಲು ತರಲೆಂದು ಹೋಗಿದ್ದಾಗ ಮನೆಯ ಸಮೀಪದ ಕೆರೆಗೆ ಆಯತಪ್ಪಿ ಬಿದ್ದಿದ್ದರು. ಮರಳಿ ಮನೆಗೆ ಬಾರದೇ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು. ಎಲ್ಲಿಯೂ ಸಿಗದೇ ಇದ್ದಾಗ ಸಹೋದರ ಬಾಲಕೃಷ್ಣ ಗೌಡರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಕೊನೆಗೆ ಯುವತಿಯ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆ ತಂದೆ ಲಿಂಗಪ್ಪ ಗೌಡ, ಸಹೋದರ ಬಾಲಕೃಷ್ಣನನ್ನು ಆಗಲಿದ್ದಾರೆ.









