
ವಿಚಾರವೊಂದಕ್ಕೆ ಸಂಬಂಧಿಸಿದಂತೆ ಪತಿ ಸುಳ್ಳು ಹೇಳುತ್ತಿದ್ದಾನೆ ಎಂಬ ಕಾರಣಕ್ಕೆ ತನ್ನ ಎರಡು ವರ್ಷದ ಮಗನ ಕುತ್ತಿಗೆ ಸೀಳಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ನೇಪಾಳ ಮೂಲದ ಶಾಂತಿಬೆನ್ ಸೋನಾರ್ ಎಂಬ ಮಹಿಳೆ ತನ್ನ ಪತಿ ಹಾಗೂ ಮಗುವಿನೊಂದಿಗೆ ವಾಸವಿದ್ದರು.
ನೇಪಾಳದ ತಮ್ಮ ಊರಾದ ಕಂಚನ್‌ಪುರಕ್ಕೆ ಮರಳಿ ಕರೆದೊಯ್ಯುವುದಾಗಿ ಪತಿ ಮಾತು ಕೊಡುತ್ತಲೇ ಇದ್ದು, ಅದನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಈ ವಿಪರೀತ ನಿರ್ಧಾರಕ್ಕೆ ಮಹಿಳೆ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.









