Tuesday, April 28, 2026
ಸುದ್ದಿ

ಬೆಳ್ಳಾರೆ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಗೃತಿ ಬೀದಿ ನಾಟಕ – ಕಹಳೆ ನ್ಯೂಸ್

ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಪೆರುವಾಜೆ ಇಲ್ಲಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ “ಸ್ವಚ್ಛ ಪರಿಸರ ಮತ್ತು ಶುದ್ಧ ಕುಡಿಯುವ ನೀರು” ಎಂಬ ಜಾಗೃತಿ ಬೀದಿ ನಾಟಕ ಪದವಿ ಪೂರ್ವ ಕಾಲೇಜು ಸಂಪಾಜೆ ಇಲ್ಲಿ ಪ್ರದರ್ಶಿಸಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ನೆಹರೂ ಯುವ ಕೇಂದ್ರ ಕೊಡಗು ಇದರ ಆಶ್ರಯದಲ್ಲಿ ನಡೆದ ಸ್ವಚ್ಛ ಭಾರತ ಸಪ್ತಾಹ 2019ಅಭಿಯಾನದಲ್ಲಿ ಬೆಳ್ಳಾರೆ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಜನರಲ್ಲಿ ಪ್ಲಾಸ್ಟಿಕ್ ಬಳಕೆಯ ದುರ್ಬಳಕೆ, ಮಾಂಸ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಎಸೆಯುವುದರಿಂದ ಮತ್ತು ನದಿ ನೀರಿನ ಮಲಿನತೆಯ ದುಷ್ಪರಿಣಾಮ ಮುಂತಾದ ಹಲವು ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮತ್ತು ಅವುಗಳ ಪರಿಹಾರೋಪಾಯ ಕ್ರಮಗಳನ್ನು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ನೆಹರೂ ಯುವ ಕೇಂದ್ರ ಕೊಡಗು ಇದರ ಸದಸ್ಯರು, ಸಂಪಾಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮತ್ತು ಉಪನ್ಯಾಸಕ ವೃಂದ, ಗ್ರಾಮಸ್ಥರು ಮತ್ತು ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಉಪನ್ಯಾಸಕರದ ಕು. ಅರ್ಚನಾ ಮತ್ತು ರಶ್ಮಿತಾ ಕರ್ಕೇರ ಉಪಸ್ಥಿತರಿದ್ದರು.