Monday, April 27, 2026
ಸುದ್ದಿ

ಬಿಗ್‌ ನ್ಯೂಸ್: ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಸದ್ಯಕ್ಕೆ ಹೊಸ ದಂಡ ವಿಧಿಸದಿರಲು ತೀರ್ಮಾನ – ಕಹಳೆ ನ್ಯೂಸ್

ಕೇಂದ್ರ ಸರ್ಕಾರ, ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ಮಾಡಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸಲು ಹೊಸ ನಿಯಮ ಅವಕಾಶ ಕಲ್ಪಿಸಿಕೊಡುತ್ತದೆ.

ಈ ನಿಯಮ ಇಂದಿನಿಂದಲೇ ಜಾರಿಗೆ ಬಂದಿದ್ದು, ಆದರೆ ರಾಜ್ಯ ಪೊಲೀಸರಿಗೆ ಈ ಕುರಿತು ಇನ್ನೂ ಆದೇಶ ತಲುಪಿಲ್ಲವಾದ ಕಾರಣ ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಸದ್ಯಕ್ಕೆ ಹೊಸ ದಂಡ ವಿಧಿಸದಿರಲು ತೀರ್ಮಾನಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಆದೇಶ ಬಂದ ಬಳಿಕವೂ ಹೊಸ ದಂಡದ ಮೊತ್ತವನ್ನು ಅಳವಡಿಸಿಕೊಳ್ಳಬೇಕಾದ ಕಾರಣ ಹೊಸ ದಂಡದ ನಿಯಮ ಜಾರಿಗೊಳ್ಳಲು ಸ್ವಲ್ಪ ಕಾಲ ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ. ಹೀಗಾಗಿ ಸದ್ಯಕ್ಕೆ ಹಳೆ ನಿಯಮವನ್ನೇ ಮುಂದುವರೆಸಿಕೊಂಡು ಹೋಗಲಾಗುತ್ತದೆ ಎಂದು ತಿಳಿದುಬಂದಿದ್ದು, ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಕೆಲ ಕಾಲದ ಮಟ್ಟಿಗೆ ರಿಲೀಫ್‌ ಸಿಕ್ಕಂತಾಗಿದೆ.