Recent Posts

Sunday, April 26, 2026
ಸುದ್ದಿ

ಕರ್ನಾಟಕ ಆಹಾರ ಇಲಾಖೆಗೆ ಕೇಂದ್ರ ಪ್ರಶಸ್ತಿ

 

ಬೆಂಗಳೂರ, ಜ.16: ಕರ್ನಾಟಕ ರಾಜ್ಯ ಸರಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಕೇಂದ್ರ ಸರಕಾರದ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿಗೆ ಪಾತ್ರವಾಗಿದೆ. ಜ.16ರಂದು ಹೊಸದಿಲ್ಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃದಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ತಂದಿರುವ ಅಮೂಲಾಗ್ರ ಬದಲಾವಣೆ, ವಿವಿಧ ಯೋಜನೆಗಳು ಕೇಂದ್ರ ಸರಕಾರದ ಪ್ರಶಸ್ತಿಗೆ ಭಾಜನವಾಗುವಂತೆ ಮಾಡಿವೆ.

ಪ್ರದಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆಹಾರ ಸಚಿವ ಧರ್ಮೇಂದ್ರ ಪ್ರಧಾನ್‌ಉಪಸ್ಥಿತಿಯಲ್ಲಿ ಕರ್ನಾಟಕ ಆಹಾರ ಇಲಾಖೆ ಈ ಪ್ರಶಸ್ತಿ ಸ್ವೀಕರಿಸಲಿದೆ. ತುರ್ತು ಕೆಲಸದ ನಿಮಿತ್ತ ಯು.ಟಿ.ಖಾದರ್ ಅವರ ಅನುಪಸ್ಥಿತಿಯಲ್ಲಿ ಆಹಾರ ಇಲಾಖೆಯ ಮುಖ್ಯ ಕಾರ್ಯದರ್ಶಿ ಪ್ರಶಸ್ತಿ ಸ್ವೀಕರಿಸುವರು.

ವರದಿ : ಕಹಳೆ ನ್ಯೂಸ್