Saturday, May 2, 2026
ಸುದ್ದಿ

ಹಲವು ಸಂಘ ಸಂಸ್ಥೆಗಳ ವತಿಯಿಂದ ವೃಕ್ಷರೋಪಣ ಕಾರ್ಯಕ್ರಮ ಉದ್ಘಾಟನೆ – ಕಹಳೆ ನ್ಯೂಸ್

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ಸರಸ್ವತೀ ವಿದ್ಯಾಲಯ ವಿದ್ಯಾನಗರ ಕಡಬ ಹಾಗೂ ಗ್ರಾಮ ವಿಕಾಸ ಸಮಿತಿ ಕೋಡಿಂಬಾಳ ಇವುಗಳ ಸಂಯುಕ್ತ ಆಶ್ರಯದಲ್ಲಿ “ವೃಕ್ಷರೋಪಣ” ಕಾರ್ಯಕ್ರಮ ಕೋಡಿಂಬಾಳ ಗ್ರಾಮದ ಗಣೇಶ್ ಕುಂಡೀಲು ಇವರ ಮನೆಯಲ್ಲಿ ಉದ್ಘಾಟನೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಲಿಂಗಪ್ಪ ಜೆ, ಸರಸ್ವತೀ ಸಮೂಹ ಸಂಸ್ಥೆಯ ಆಡಳಿತ ಮಂಡಳಿಯ ಕೋಶಾಧಿಕಾರಿ, ಇವರು ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ನಮ್ಮ ಆರೋಗ್ಯವು ಉತ್ತಮವಾಗಿರುವುದೆಂದು ನುಡಿದರು. ಕಾರ್ಯಕ್ರಮವನ್ನು ಗಿರೀಶ್ ಗೌಡ ಸಿ ಸ್ವಾಗತಿಸಿ, ಹೊನ್ನಮ್ಮ ವಂದಿಸಿ, ವಸಂತ್ ಕೆ ನಿರೂಪಿಸಿದರು.