Saturday, May 2, 2026
ರಾಜಕೀಯ

ಸಿದ್ದಾರ್ಥ ಸಾವಿಗೆ ದೇಶದ ಆಡಳಿತದ ಆರ್ಥಿಕ ದುಸ್ಥಿತಿ ಕಾರಣ – ಎಂ.ವೆಂಕಪ್ಪ ಗೌಡ ಆರೋಪ – ಕಹಳೆ ನ್ಯೂಸ್

ಸುಳ್ಯ: ಕಾಫಿಡೇ ಮಾಲಕ, ಉದ್ಯಮಿ ಸಿದ್ದಾರ್ಥ ಸಾವಿಗೆ ದೇಶದ ಆಡಳಿತ ಉಂಟು ಮಾಡಿರುವ ಆರ್ಥಿಕ ದುಸ್ಥಿತಿಯೇ ಕಾರಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಸುಳ್ಯ ನಗರ ಪಂಚಾಯಿತಿ ಸದಸ್ಯ ಎಂ. ವೆಂಕಪ್ಪ ಗೌಡ ಆರೋಪಿಸಿದ್ದಾರೆ.

ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾರ್ಥ ಸಾವಿಗೆ ಈ ದೇಶ ಇಂದು ಎದುರಿಸುತ್ತಿರುವ ಆರ್ಥಿಕ ಪರಿಸ್ಥಿತಿಯೇ ಇದಕ್ಕೆ ಕಾರಣ ಎಂದು ತಿಳಿದು ಬರುತ್ತದೆ. ಹಲವು ಉದ್ಯಮಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ. ಕಿಂಗ್‍ಫಿಶರ್, ಜೆಟ್ ಏರ್‍ವೇಸ್ ಬಂದ್ ಆಗಿದೆ. ಇದು ಮೇಲ್ನೋಟಕ್ಕೆ ಕಾಣುವಂತದ್ದು. ಆದರೆ ಈ ಕಂಪೆನಿಗಳಲ್ಲಿನ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಆಡಳಿತ ತಂದಿಟ್ಟ ಆರ್ಥಿಕ ಸಂಕಷ್ಟ. ಸಿದ್ದಾರ್ಥರಂತವರು ಮಾನಕ್ಕೆ ಅಂಜಿ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂತು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಸಿದ್ದಾರ್ಥ ಸಾವಿನ ನೋವಿನ ಮೂಲಕ ಈಗ ಬಿಜೆಪಿಯವರಿಗೆ ಇದು ಅರ್ಥವಾಗಿರಬಹುದು ಎಂದು ಹೇಳಿದ ಅವರು, ಸಿದ್ದಾರ್ಥ ಸಾವಿಗೆ ಮುನ್ನ ಕಳುಹಿಸಿದ ಈ ಮೇಲ್ ಪತ್ರದ ಆಧಾರದಲ್ಲಿ ಅವರಿಗೆ ಕಿರುಕುಳ ನೀಡಿದವರ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಿದ್ದಾರ್ಥ ಸಾವಿನಿಂದ ಇಡೀ ಕಾಫಿ ಉದ್ಯಮ ಮತ್ತು ಕಾಫಿ ಬೆಳೆಗಾರರಿಗೆ ನಷ್ಟವಾಗಿದೆ. ಕಾಫಿ ಬೆಳೆಗಾರರ ರಕ್ಷಣೆಗೆ ವಿಶೇಷ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಬೇಕು. ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿರುವ ವೇಳೆ ಇಂತಹ ಸಂಗತಿ ನಡೆದಿರುತ್ತಿದ್ದರೆ ಬಿಜೆಪಿಯವರು ನಿಮ್ಮದು ಕೊಲೆಗಡುಕ ಸರಕಾರ ಎಂದು ಗಲಭೆ ಎಬ್ಬಿಸುತ್ತಿದ್ದರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಧರ್ಮಪಾಲ ಕೊಯಿಂಗಾಜೆ, ನಂದರಜ ಸಂಕೇಶ, ಲಕ್ಷ್ಮಣ ಶೆಣೈ ಮೊದಲಾದವರು ಉಪಸ್ಥಿತರಿದ್ದರು.