Saturday, May 2, 2026
ರಾಜಕೀಯ

ಬಿಎಸ್ ವೈ `ಸಚಿವ ಸಂಪುಟ’ ರಚನೆಗೆ ಡೇಟ್ ಫಿಕ್ಸ್ – ಕಹಳೆ ನ್ಯೂಸ್

ಬೆಂಗಳೂರು : ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಸಚಿವ ಸಂಪುಟ ರಚನೆಗೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಆಗಸ್ಟ್ 9 ರಂದು ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ.

ಅಮಿತ್ ಶಾ, ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೆ ಮಾಡಿ ಆಗಸ್ಟ್ 9 ರಂದು ಸಚಿವ ಸಂಪುಟ ರಚನೆ ಮಾಡಿ ಎಂದಿದ್ದು, ಸಂಪುಟ ರಚನೆಗೂ ಮುನ್ನ ಆಗಸ್ಟ್ 7ರಂದು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಚಿವ ಸ್ಥಾನವನ್ನು ಯಾರಿಗೆ ಕೊಡಬೇಕು ಎನ್ನುವ ಕುರಿತು ಸಿಎಂ ಬಿಎಸ್ ವೈ ಅವರು ಅಮಿತ್ ಶಾ ಅವರಿಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಅಮಿತ್ ಶಾ ಅವರು ಈಗಾಗಲೇ ಪಟ್ಟಿ ಸಿದ್ದಪಡಿಸಿದ್ದಾರೆ. ಆ ಪಟ್ಟಿ ಪ್ರಕಾರವೇ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.